alex Certify
ಕನ್ನಡ ದುನಿಯಾ       Mobile App
       

Kannada Duniya

ದಡೂತಿ ಮಹಿಳೆ ಎಷ್ಟು ತೂಕ ಇಳಿಸಿಕೊಂಡಿದ್ದಾಳೆ ಗೊತ್ತಾ?

emam-1_072517084440

ವಿಶ್ವದ ಅತ್ಯಂತ ತೂಕದ ಮಹಿಳೆ ಇಮಾನ್ ಅಹ್ಮದ್ ತೂಕ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಈವರೆಗೆ ಇಮಾನ್ 315 ಕೆ.ಜಿ ತೂಕ ಇಳಿಸಿದ್ದಾಳೆ. ಇಮಾನ್ ಹಾಕಿರುವ ಹೊಸ ಫೋಟೋದಲ್ಲಿ ಇಮಾನ್ ತೂಕ ಇಳಿಸಿರುವುದು ಸ್ಪಷ್ಟವಾಗಿ ಕಾಣ್ತಿದೆ.

ಈ ವರ್ಷ ಫೆಬ್ರವರಿಯಲ್ಲಿ ಭಾರತಕ್ಕೆ ಬಂದಿದ್ದಳು ಇಮಾನ್. ಸೈಫಿ ಆಸ್ಪತ್ರೆಯಲ್ಲಿ ಇಮಾನ್ ಗೆ ಚಿಕಿತ್ಸೆ ನೀಡಲಾಗಿತ್ತು. ಯುರೋಪಿನಿಂದ ಬರುವಾಗ 500 ಕೆ.ಜಿ ತೂಕವಿದ್ದ ಇಮಾನ್ ಭಾರತದಲ್ಲಿ ಶಸ್ತ್ರಚಿಕಿತ್ಸೆ ಪಡೆದ ನಂತ್ರ 250 ಕೆ.ಜಿ ಕಡಿಮೆಯಾಗಿದ್ದಾಳೆ ಎನ್ನಲಾಗ್ತಾ ಇತ್ತು. ನಂತ್ರ ಅಬುದಾಬಿಗೆ ತೆರಳಿದ್ದ ಇಮಾನ್ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಅಬುದಾಬಿಯಲ್ಲಿ ಚಿಕಿತ್ಸೆ ಪಡೆದ ಇಮಾನ್  ತೂಕ ಇಳಿಯುತ್ತಿದೆ. ತೂಕವನ್ನು 100ಕ್ಕಿಂತ ಕಡಿಮೆ ಮಾಡುವ ಪ್ರಯತ್ನದಲ್ಲಿದ್ದಾರೆ ವೈದ್ಯರು. ಇಮಾನ್ ತೂಕ ಇಳಿಕೆ ಆಕೆ ಸಹೋದರಿ ಖುಷಿಗೆ ಕಾರಣವಾಗಿದೆ. ಇಮಾನ್ ಕೂಡ ತುಂಬಾ ಖುಷಿಯಾಗಿದ್ದಾಳೆ.

ಹುಟ್ಟುವಾಗಲೆ ಇಮಾನ್ 5 ಕೆ.ಜಿ ತೂಕವಿದ್ದಳಂತೆ. ನಂತ್ರ ಆಕೆ ತೂಕ ಏರುತ್ತ ಹೋಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಹಾಸಿಗೆ ಹಿಡಿದಿದ್ದಾಳೆ ಇಮಾನ್.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...