alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಅತ್ಯಂತ ದಪ್ಪ ಬಾಲಕನ ತೂಕ ಕೇಳಿದ್ರೆ ದಂಗಾಗ್ತೀರಾ

_2749852609370781515_n

ಹತ್ತು ವರ್ಷದ ಆರ್ಯ ಪರಮಾನಾ ಬೊಜ್ಜಿಗೆ ಹೈರಾಣವಾಗಿ ಹೋಗಿದ್ದಾನೆ. ಇಂಡೋನೇಷ್ಯಾದ ಪಶ್ಚಿಮ ಜಾವಾ ಬಳಿಯ ಗ್ರಾಮವೊಂದರ ನಿವಾಸಿ ಆರ್ಯ 192 ಕೆ.ಜಿ ತೂಕವಿದ್ದಾನೆ. ದಪ್ಪಗಿರುವ ಆರ್ಯ,ವಿಶ್ವದ ಅತ್ಯಂತ ದಪ್ಪ ಬಾಲಕ ಎನಿಸಿಕೊಂಡಿದ್ದಾನೆ.

ಬೊಜ್ಜಿನಿಂದಾಗಿ ಬಾಲಕನಿಗೆ ನಡೆಯಲು ಆಗುವುದಿಲ್ಲ. ಕುಳಿತುಕೊಳ್ಳಲೂ ಸಾಧ್ಯವಾಗ್ತಿಲ್ಲ. ದೇಹಕ್ಕೆ ಬಟ್ಟೆ ಸುತ್ತಿಕೊಂಡು ಓಡಾಡ್ತಾನೆ ಆರ್ಯ. ಅಸ್ತಮಾ, ನಿದ್ದೆ ಬರದ ಕಾಯಿಲೆಗಳು ಕೂಡ ಬಾಲಕನನ್ನು ಕಾಡ್ತಾ ಇವೆ. ವೈದ್ಯರು ಡಯಟ್ ಮಾಡುವಂತೆ ಹೇಳಿದ್ದಾರೆ. ಹಾಗಾಗಿ ಬಾಲಕನಿಗೆ ಬ್ರೌನ್ ರೈಸ್ ಮಾತ್ರ ನೀಡಲಾಗ್ತಾ ಇದೆ.

ಆರ್ಯ ಹುಟ್ಟಿದಾಗ ಸಾಮಾನ್ಯ ಮಕ್ಕಳಂತೆಯೇ ಇದ್ದ. ಎರಡು ವರ್ಷದಲ್ಲಿ ಆತನ ತೂಕ ಜಾಸ್ತಿಯಾಗಲು ಶುರುವಾಗಿದೆ. ಮಗನ ಆರೋಗ್ಯ ಸರಿಯಾಗಿದ್ದ ಕಾರಣ ಪಾಲಕರು ತಲೆಕೆಡಿಸಿಕೊಳ್ಳಲಿಲ್ಲ. ಆದ್ರೆ ಒಂದೇ ಸಮನೆ ತೂಕ ಜಾಸ್ತಿಯಾಗಿ ಆರ್ಯ ಸ್ಥಿತಿ ಹೀಗಾಗಿದೆ.

ಊಟ ಮತ್ತು ನಿದ್ದೆ ಮಾಡುವುದು ಆರ್ಯ ದಿನಚರಿ. ಇದನ್ನು ಬಿಟ್ಟರೆ ಬಾತ್ ಟಬ್ ನಲ್ಲಿ ಕುಳಿತುಕೊಳ್ಳಲು ಬಾಲಕ ಇಷ್ಟಪಡ್ತಾನೆ. ಆರ್ಯ ತಂದೆ ಸಾಮಾನ್ಯ ರೈತನಾಗಿದ್ದು, ದುಬಾರಿ ಚಿಕಿತ್ಸೆ ನೀಡುವುದು ಕಷ್ಟವಾಗಿದೆ. ಸಂಘ- ಸಂಸ್ಥೆಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ ಪಾಲಕರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...