alex Certify
ಕನ್ನಡ ದುನಿಯಾ       Mobile App
       

Kannada Duniya

ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡ್ತೀರಾ? ಇದನ್ನೊಮ್ಮೆ ನೀವು ಓದಲೇಬೇಕು….

night-shift

ಸಾಮಾನ್ಯವಾಗಿ ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡೋದು ಅಂದ್ರೆ ಯಾರಿಗೂ ಇಷ್ಟವಿಲ್ಲ. ನಿದ್ದೆಗೆಟ್ಟು ಕೆಲಸ ಮಾಡಿದ್ರೆ ಆರೋಗ್ಯಕ್ಕೂ ಹಾನಿಕರ ಅನ್ನೋ ಅರಿವು ಎಲ್ಲರಿಗೂ ಇದೆ. ಆದ್ರೆ ಈ ನೈಟ್ ಶಿಫ್ಟ್ ನಿಮ್ಮ ಲಿವರ್ ಮೇಲೆ ಕೂಡ ಕೆಟ್ಟ ಪರಿಣಾಮ ಬೀರಬಹುದು. ಹೊಸ ಸಂಶೋಧನೆಯೊಂದರಲ್ಲಿ ಈ ಆಘಾತಕಾರಿ ಅಂಶ ಬಯಲಾಗಿದೆ. ದಿನದ 24 ಗಂಟೆಗಳಲ್ಲಿ ಹಸಿವು ಮತ್ತು ಆಹಾರ ಸೇವನೆಯ ಚಕ್ರದ ಜವಾಬ್ಧಾರಿ ಲಿವರ್ ಗೆ ಸೇರಿದ್ದು.

ಆದ್ರೆ ನೀವು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದ್ರೆ ಸಮಯಕ್ಕೆ ಸರಿಯಾಗಿ ಊಟ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಲಿವರ್ ಗೆ ಎಫೆಕ್ಟ್ ಆಗುತ್ತದೆ. ರಾತ್ರಿ ಸಮಯದಲ್ಲಿ ಲಿವರ್ ಆಕಾರ ವೃದ್ಧಿಸುತ್ತದೆ. ಓವರ್ ಡೋಸ್ ಗೆ ಖುದ್ದು ಅದೇ ಸಜ್ಜಾಗುತ್ತದೆ. ಆದ್ರೆ ಸಮಯಕ್ಕೆ ಸರಿಯಾಗಿ ಅದಕ್ಕೆ ಆಹಾರವೇ ದೊರೆಯುವುದಿಲ್ಲ.

ಸಾಮಾನ್ಯ ಜೈವಿಕ ಕ್ರಿಯೆ ಏರುಪೇರಾದಾಗ ಲಿವರ್ ಗಾತ್ರದ ಹಿಗ್ಗುವಿಕೆ ಮತ್ತು ಕುಗ್ಗುವಿಕೆಯ ಮೇಲೆ ಪರಿಣಾಮ ಉಂಟಾಗುತ್ತದೆ. ನಮ್ಮ ನಿತ್ಯ ಕ್ರಿಯೆಗಳಲ್ಲಿ ಏರುಪೇರಾದಲ್ಲಿ ಲಿವರ್ ಅದನ್ನು ಸಹಿಸಿಕೊಳ್ಳುವುದಿಲ್ಲ. ಇಲಿಗಳನ್ನು ಬಳಸಿ ಈ ಬಗ್ಗೆ ಪ್ರಯೋಗ ನಡೆಸಲಾಗಿದೆ. ರಾತ್ರಿ ಅವುಗಳನ್ನು ಎಚ್ಚರವಾಗಿಟ್ಟು, ಆಹಾರ ತಿನ್ನಿಸಿ ಬೆಳಗ್ಗೆ ನಿದ್ದೆ ಮಾಡಲು ಅವಕಾಶ ನೀಡಲಾಗಿತ್ತು.

ಈ ಪ್ರಯೋಗದಿಂದ ರಾತ್ರಿ ಪಾಳಿಯಿಂದ ಲಿವರ್ ಗೆ ಎಂತಹ ಪೆಟ್ಟು ಬೀಳುತ್ತದೆ ಅನ್ನೋದು ಬಹಿರಂಗವಾಗಿದೆ. ರಾತ್ರಿ ಲಿವರ್ ಆಕಾರ ಶೇ.40ರಷ್ಟು ವೃದ್ಧಿಸುತ್ತದೆ. ಆದ್ರೆ ಹಗಲಿನಲ್ಲಿ ಅದು ಸಹಜ ಆಕಾರಕ್ಕೆ ಬರುತ್ತದೆ ಅಂತಾ ಜಿನೆವಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...