alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಕೆಲಸ ಕಳೆದುಕೊಂಡ್ರು 8 ಮಂದಿ

ಕೆರಿಬಿಯನ್ ದ್ವೀಪ ರಾಷ್ಟ್ರ ಕ್ಯೂಬಾದಲ್ಲಿ ಈಗ ಆಹಾರಕ್ಕೆ ಹಾಹಾಕಾರ. ರಾಜಧಾನಿ ಹವಾನಾದಲ್ಲಿನ ಸುಪರ್‌ ಮಾರ್ಕೆಟ್ ಒಂದರಲ್ಲಿ ಗ್ರಾಹಕರೊಬ್ಬರಿಗೆ 15,000 ಸೇಬುಗಳನ್ನು ಮಾರಿದ ಕಾರಣಕ್ಕಾಗಿ ಅನೇಕ ಉದ್ಯೋಗಿಗಳು ಕೆಲಸವನ್ನೇ ಕಳೆದುಕೊಳ್ಳಬೇಕಾಗಿ ಬಂದಿದೆ.

ಅರೆ ಮಿಲಿಟರಿ ರೀತಿಯಲ್ಲಿ ಯುವಕರ ಗುಂಪೊಂದು ಮಳಿಗೆಗೆ ಆಗಮಿಸಿ 100 ಆಪಲ್‌ಗಳ 100 ಕೇಸ್‌ಗಳನ್ನು ಖರೀದಿಸಿತು. ಆ ಗುಂಪು ಪ್ರತಿ ಆಪಲ್‌ಗೆ 45 ಸೆಂಟ್ಸ್ ಪಾವತಿಸಿದರು. ಇದೆಲ್ಲವೂ ಒಬ್ಬನೇ ಗ್ರಾಹಕನಿಗೆ ಹೋಗಿದೆ ಎಂದು ಈ ಘಟನೆಯನ್ನು ಪ್ರತ್ಯಕ್ಷ ಕಂಡ ಪತ್ರಕರ್ತ ಐರೆಲ್ ಸ್ಯಾನ್‌ಚೆಝ್ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡರು.

ಇದು ವ್ಯಾಪಕವಾಗಿ ಸುದ್ದಿಗೀಡಾಯಿತು. ಇದರಲ್ಲಿ ಮಳಿಗೆಯ ನೌಕರರ ಪಾತ್ರವಿದೆ ಎಂಬುದೂ ಬಹಿರಂಗಗೊಂಡಿತು. ಈ ಕಾರಣಕ್ಕಾಗಿ ಮಳಿಗೆಯ ಮಾಲೀಕ ಸಂಸ್ಥೆ ಸೈಮೆಕ್ಸ್ ಕಾರ್ಪೊರೇಶನ್ ಎಂಟು ಮಂದಿ ನೌಕರರನ್ನು ವಜಾ ಮಾಡಿದೆ. ಕ್ಯೂಬಾ ಆಪಲ್ ಸಹಿತ ತನ್ನ 11 ಮಿಲಿಯನ್ ಜನರ ಬಹುತೇಕ ಆಹಾರವನ್ನು ಆಮದು ಮಾಡಿಕೊಳ್ಳುತ್ತದೆ. ಹಾಲು, ಹಣ್ಣು, ಬೀರ್‌ನ ಕೊರತೆ ಆಗಾಗ್ಗೆ ಇಲ್ಲಿ ಆಗುತ್ತಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...