alex Certify
ಕನ್ನಡ ದುನಿಯಾ       Mobile App
       

Kannada Duniya

ಡೊನಾಲ್ಡ್ ಟ್ರಂಪ್ ವಿರುದ್ಧ ‘ವುಮೆನ್ಸ್ ಮಾರ್ಚ್’

us-p

ವಾಷಿಂಗ್ಟನ್: ಅಮೆರಿಕದ 45 ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡಿದ್ದು, ಮೊದಲ ದಿನ ಅಧ್ಯಕ್ಷರ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಇದೇ ವೇಳೆ ಟ್ರಂಪ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಭಾರೀ ಜೋರಾಗಿದ್ದು, ವಾಷಿಂಗ್ಟನ್ ನಲ್ಲಿ ನಡೆದ ‘ವುಮೆನ್ಸ್ ಮಾರ್ಚ್’ ಪ್ರೊಟೆಸ್ಟ್ ನಲ್ಲಿ ಲಕ್ಷಾಂತರ ಮಹಿಳೆಯರು ಪಾಲ್ಗೊಂಡಿದ್ದರು.

ವಿಶ್ವದ ಅನೇಕ ದೇಶಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು 10 ಲಕ್ಷ ಮಹಿಳೆಯರು ಪಾಲ್ಗೊಂಡಿದ್ದಾರೆ.

ವಾಷಿಂಗ್ಟನ್ ಪ್ರತಿಭಟನೆಯಲ್ಲಿ ಸೆಲೆಬ್ರಿಟಿಗಳಾದ ಮಡೊನ್ನಾ, ಫೆರೆರಾ, ಸ್ಟೈನಿವಿಲ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಹಿಲರಿ ಕ್ಲಿಂಟನ್ ಕೂಡ ಟ್ವಿಟರ್ ನಲ್ಲಿ ಬೆಂಬಲ ನೀಡಿದ್ದಾರೆ.

ಮಹಿಳೆಯರ ಮತ್ತು ನಾಗರಿಕರ ಹಕ್ಕುಗಳನ್ನು ದಮನ ಮಾಡಲು ಟ್ರಂಪ್ ಹೊರಟಿದ್ದಾರೆ. ಅಧ್ಯಕ್ಷರಾದ ಕೂಡಲೇ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಹೋರಾಟದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ದೂರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...