alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಿಂದ ಕೆಳಗಿಳಿದು ಚಾಲಕಿ ಮಾಡಿದ್ಲು ಕಿಕಿ ಡಾನ್ಸ್…!

ಕಿಕಿ ಡಾನ್ಸ್ ಮಾಡುವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಚಲಿಸುತ್ತಿರುವ ಕಾರು, ಬೈಕ್, ರೈಲಾಯ್ತು. ಈಗ ಚಲಿಸುತ್ತಿರುವ ವಿಮಾನದಿಂದ ಇಳಿದು ಕಿಕಿ ಡಾನ್ಸ್ ಮಾಡಿರುವ ವಿಡಿಯೋ ಒಂದು ವೈರಲ್ ಆಗಿದೆ. ವಿಮಾನ ಚಾಲಕಿ ಚಲಿಸುತ್ತಿರುವ ವಿಮಾನದಿಂದ ಕೆಳಗಿಳಿದು ಡಾನ್ಸ್ ಮಾಡಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಚಾಲಕಿ ಅಲೆಜಾಂದ್ರ ಹಾಗೂ ಸಹ ಚಾಲಕಿ ಡಾನ್ಸ್ ಮಾಡ್ತಿದ್ದಾರೆ. ವಿಮಾನವನ್ನು ಸ್ಟಾರ್ಟ್ ಮಾಡಿ ವಿಮಾನದಿಂದ ಕೆಳಗಿಳಿದು ಡಾನ್ಸ್ ಮಾಡುವ ವಿಡಿಯೋ ಇದಾಗಿದೆ. ಈ ವಿಡಿಯೋವನ್ನು ಟ್ವೀಟರ್ ನಲ್ಲಿ ಈವರೆಗೆ 25 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ವಿಡಿಯೋ ನೋಡಿದ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಚಾಲಕಿ ಲೈಸೆನ್ಸ್ ಬಗ್ಗೆ ಕಮೆಂಟ್ ಮಾಡಿದ್ದಾರೆ. ಚಾಲಕಿ ಒಪ್ಪಿಗೆ ಪಡೆದು ಹೀಗೆ ಮಾಡಿದ್ದಾಳೆಂದು ಕೆಲವರು ಹೇಳಿದ್ದಾರೆ. ಚಲಿಸುತ್ತಿರುವ ವಿಮಾನದಲ್ಲಿ ಪ್ರಯಾಣಿಕರಿಲ್ಲ. ಆದ್ರೆ ಫೋಟೋಗ್ರಾಫರ್ ಮಾತ್ರ ಒಳಗಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...