alex Certify
ಕನ್ನಡ ದುನಿಯಾ       Mobile App
       

Kannada Duniya

ಕಿರುಕುಳದ ಬಗ್ಗೆ ದೂರು ನೀಡಿದ್ರೆ ಕಂಪನಿ ಕೇಳ್ತು ಇಂಥ ಪ್ರಶ್ನೆ

ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬಳಿಗೆ ಕಿರುಕುಳ ನೀಡಲಾಗಿದೆ. ಈ ಬಗ್ಗೆ ಮಹಿಳೆ ದೂರು ನೀಡಿದ್ರೆ ಕಂಪನಿ ಮಹಿಳೆಗೆ ಕೇಳಿದ ಪ್ರಶ್ನೆ ಮುಜುಗರ ತರಿಸುವಂತಿದೆ.

ಘಟನೆ ಬ್ರಿಟನ್ ನಲ್ಲಿ ನಡೆದಿದೆ. ಎಮಿಲಿ ಲುಸಿಂಡಾ ಕೋಲ್ ವರ್ಜಿನ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಹಳೆಯ ಮ್ಯಾನೇಜರ್ ಒಬ್ಬ ಎಮಿಲಿಯನ್ನು ಹನಿ ಎಂದು ಕರೆದಿದ್ದಾನಂತೆ. ಇದ್ರಿಂದ ಅಸಮಾಧಾನಗೊಂಡ ಎಮಿಲಿ ವರ್ಜಿನ್ ರೈಲು ಕಂಪನಿಗೆ ದೂರು ನೀಡಿದ್ದಾಳೆ. ಆದ್ರೆ ಕಂಪನಿ ಕಡೆಯಿಂದ ಬಂದ ಉತ್ತರ ಮತ್ತಷ್ಟು ಕೆಟ್ಟದಾಗಿತ್ತು ಎಂದು ಎಮಿಲಿ ಹೇಳಿದ್ದಾಳೆ.

ಎಮಿಲಿ ಟ್ವೀಟರ್ ಮೂಲಕ ಕಂಪನಿಗೆ ದೂರು ನೀಡಿದ್ದಾಳೆ. ಅವ್ಯವಸ್ಥೆಗೆ ಕ್ಷಮೆಯಿರಲಿ ಎಮಿಲಿ. ಮುಂದಿನ ಬಾರಿ ಪೆಟ್ ಅಥವಾ ಲವ್ ಎಂದು ಕರೆಯಿಸಿಕೊಳ್ಳಲು ನೀವು ಬಯಸುತ್ತೀರಾ ಎಂದು ಕಂಪನಿ ಪ್ರಶ್ನೆ ಕೇಳಿದೆ. ಇದಕ್ಕೆ ಎಮಿಲಿ ಖಡಕ್ ಉತ್ತರ ನೀಡಿದ್ದಾಳೆ.

ಎಮಿಲಿ ಗಂಭೀರವಾಗಿ ವರ್ತಿಸಿ ಎಂದು ಟ್ವಿಟ್ ಮಾಡ್ತಿದ್ದಂತೆ ಕಂಪನಿ ಎಮಿಲಿಯ ಎಲ್ಲ ಟ್ವಿಟನ್ನು ಡಿಲೀಟ್ ಮಾಡಿದೆ. ಆದ್ರೆ ಸ್ಕ್ರೀನ್ ಶಾಟ್ ತೆಗೆದುಕೊಂಡು ತನ್ನ ಟ್ವೀಟರ್ ಅಕೌಂಟ್ ಗೆ ಹಾಕಿರುವ ಎಮಿಲಿ ಕಂಪನಿ ವರ್ತನೆಯನ್ನು ಎಲ್ಲರ ಮುಂದಿಟ್ಟಿದ್ದಾಳೆ. ಎಮಿಲಿ ಈ ಕೆಲಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...