alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ದಿನದಲ್ಲಿ 110 ಪುರುಷರ ಜೊತೆ ಸಂಬಂಧ ಬೆಳೆಸಿದ ಮಹಿಳೆ

worker

ಬ್ರಿಟಿಷ್ ಮಹಿಳೆಯೊಬ್ಬಳು ತನ್ನ ನೋವಿನ ಕಥೆಯನ್ನು ಬಿಚ್ಚಿಟ್ಟಿದ್ದಾಳೆ. ಹದಿಹರೆಯದಲ್ಲಿದ್ದಾಗ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಲಾಗಿತ್ತಂತೆ. ಆಗ ಪ್ರತಿದಿನ 110ಕ್ಕೂ ಹೆಚ್ಚು ಮಂದಿ ಜೊತೆ ಆಕೆ ಮಲಗಬೇಕಾಗಿತ್ತಂತೆ.

ಪ್ರೇಮ ಜಾಲಕ್ಕೆ ಸಿಲುಕಿದ್ದ ಮಹಿಳೆ ಗ್ರೀಸ್ ನಿಂದ ಯುನಾನ್ ಗೆ ಹೋಗಿದ್ದಳಂತೆ. ಯುನಾನ್ ಗೆ ಹೋದ ವೇಳೆ ಆಕೆಗೆ 14 ವರ್ಷ ವಯಸ್ಸಾಗಿತ್ತಂತೆ. ಅಲ್ಲಿಂದ ಓಡಿ ಬಂದಾಗ ಆಕೆ 21 ವರ್ಷದವಳಾಗಿದ್ದಳಂತೆ. ಅಲ್ಲಿನ ನೋವಿನ ಕತೆಯನ್ನು ಮಹಿಳೆ ತಾನು ಬರೆದ ಪುಸ್ತಕದಲ್ಲಿ ಹೇಳಿಕೊಂಡಿದ್ದಾಳೆ.

ಮೇಗನ್ ಸ್ಟೀವನ್ಸ್ ಎಂಬಾಕೆ ರಜಾ ಕಳೆಯಲು ಗ್ರೀಸ್ ಗೆ ಹೋಗುತ್ತಾಳೆ. ಅಲ್ಲಿ ಜ್ಯಾಕ್ ಎಂಬಾತನ ಪರಿಚಯವಾಗುತ್ತೆ.ಪರಿಚಯ ಪ್ರೇಮಕ್ಕೆ ತಿರುಗುತ್ತೆ. ಯುನಾನ್ ನ ರಾಜಧಾನಿ ಅಥೆನ್ಸ್ ಗೆ ಹೋಗಿ ಅಲ್ಲಿ ನೆಲೆಸೋಣ. ಅಲ್ಲಿಯೇ ನಾನು ಕೆಲಸ ಮಾಡುತ್ತೇನೆಂದು ಜ್ಯಾಕ್ ಮೇಗನ್ ಸ್ಟೀವನ್ಸ್ ಗೆ ಹೇಳುತ್ತಾನೆ. ಆತನನ್ನು ನಂಬಿದ ಮಹಿಳೆ ಅಲ್ಲಿಗೆ ಹೋಗ್ತಾಳೆ. ಆದ್ರೆ ಮೋಸ ಮಾಡಿದ ಜ್ಯಾಕ್ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳುತ್ತಾನೆ.

ಮೇಗನ್ ನನ್ನು ಒಂದು ಕೊಠಡಿಯಲ್ಲಿ ಕೂಡಿ ಹಾಕಲಾಗುತ್ತೆ. ಅಲ್ಲಿ ಒಂದು ಬೆಡ್ ಬಿಟ್ಟರೆ ಮತ್ತೇನೂ ಇರುವುದಿಲ್ಲ. ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗುತ್ತಾನೆ. ಈವರೆಗೂ ಇದರ ಬಗ್ಗೆ ಗೊತ್ತಿರದ ಮೇಗನ್ ಕಂಗಾಲಾಗುತ್ತಾಳೆ. ಆ ವ್ಯಕ್ತಿ ಆಕೆಗೆ 50 ಯುರೋಗಳನ್ನು ಕೊಟ್ಟು ಹೊರಟು ಹೋಗುತ್ತಾನೆ.

ಒಂದೇ ದಿನ ಕನಿಷ್ಠ ಎಂಟು ಅಪರಿಚಿತ ವ್ಯಕ್ತಿಗಳ ಜೊತೆ ಆಕೆ ಸಂಬಂಧ ಬೆಳೆಸಬೇಕಾಗುತ್ತದೆ. ಜ್ಯಾಕ್ ನನ್ನು ಪ್ರೀತಿಸ್ತಾ ಇದ್ದ ಆಕೆ ಆತನಿಗಾಗಿ ಏನು ಮಾಡಲೂ ಸಿದ್ಧಳಿರುತ್ತಾಳೆ. ಜ್ಯಾಕ್ ಹೇಳಿದ್ದರಿಂದ ಆಕೆ ಸಂಬಂಧ ಬೆಳೆಸಲು ಒಪ್ಪಿಕೊಳ್ಳುತ್ತಾಳೆ. ಇದರಿಂದ ಹಣ ಮಾಡ್ತಿದ್ದ ಜ್ಯಾಕ್ ಒಂದು ದಿನ ಮೇಗನ್ ನನ್ನು ಬೇರೆಯವರಿಗೆ ಮಾರಿ ಬಿಡುತ್ತಾನೆ. ಅಲ್ಲಿ ಪ್ರತಿದಿನ 110 ಅಪರಿಚಿತ ವ್ಯಕ್ತಿಗಳ ಜೊತೆ ಶಾರೀರಿಕ ಸಂಬಂಧ ಬೆಳೆಸಬೇಕಾಗುತ್ತದೆ.

ಇದರಿಂದ ಮೇಗನ್ ಆರೋಗ್ಯ ಸಂಪೂರ್ಣ ಹದಗೆಡುತ್ತದೆ. ಮೂರು ತಿಂಗಳ ಕಾಲ ಆಸ್ಪತ್ರೆಯಲ್ಲಿರಬೇಕಾಗುತ್ತದೆ.ಆಸ್ಪತ್ರೆ ಸಿಬ್ಬಂದಿಗೆ ಮೇಗನ್ ತನ್ನ ನೋವು ಹೇಳಿಕೊಳ್ತಾಳೆ. ಆಕೆ ಸಹಾಯಕ್ಕೆ ನಿಂತ ಸಿಬ್ಬಂದಿ ಆಕೆ ಅಮ್ಮನಿಗೆ ಸುದ್ದಿ ತಿಳಿಸುತ್ತಾರೆ.

ರಾಕ್ಷಸರಿಂದ ಮುಕ್ತಿ ಪಡೆದ ಮೇಗನ್ ಬ್ರಿಟನ್ ತಲುಪುತ್ತಾಳೆ. ಸದ್ಯ ಮೇಗನ್ ತನ್ನ ನೋವಿನ ಕಥೆಯನ್ನು ಅಕ್ಷರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾಳೆ. ಜನವರಿ 29ರಂದು ಪುಸ್ತಕ ಬಿಡುಗಡೆಯಾಗಲಿದೆ. ಪ್ರೀತಿ ಮಾಡಿ,ಆದ್ರೆ ಅಪರಿಚಿತ ವ್ಯಕ್ತಿಯನ್ನು ನಂಬಿ ಎಲ್ಲಿಗೂ ಹೋಗ ಬೇಡಿ ಎಂದು ಮೇಗನ್ ಸಲಹೆ ನೀಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...