alex Certify
ಕನ್ನಡ ದುನಿಯಾ       Mobile App
       

Kannada Duniya

ಮನುಷ್ಯನ ದೇಹ, ಬೆಕ್ಕಿನ ವರ್ತನೆ.! ವಿಡಿಯೋ ನೋಡಿ..

nano2

ವಿಶ್ವದಲ್ಲಿ ಚಿತ್ರ- ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ವಿಭಿನ್ನ ಜನರು ಕಾಣ ಸಿಗ್ತಾರೆ. ನಾರ್ವೆಯ 20 ವರ್ಷದ ಹುಡುಗಿ ಆಶ್ಚರ್ಯ ಹುಟ್ಟಿಸುವಂತ ಹೇಳಿಕೆಯೊಂದನ್ನು ನೀಡಿದ್ದಾಳೆ. ನಾನೋ ಹೆಸರಿನ ಆಕೆ ಹುಡುಗಿಯಲ್ಲವಂತೆ. ಬೆಕ್ಕಂತೆ. ಅವಳ ಮನಸ್ಸಿನಲ್ಲಿ ಬೆಕ್ಕಿನಂತ ಭಾವನೆಗಳು ಬರುತ್ತವಂತೆ.

ನಾನೋಳ ವರ್ತನೆ ಬೆಕ್ಕಿನಂತೆ ಇದೆ. ದೇಹ ಮಾತ್ರ ಮನುಷ್ಯ ರೂಪ ಪಡೆದಿದೆಯಂತೆ. ಆಕೆ 16 ನೇ ವಯಸ್ಸಿನಲ್ಲಿರುವಾಗ ಇದು ಅರಿವಿಗೆ ಬಂದಿದೆಯಂತೆ.ಬೇರೆಯವರಿಗೆ ತುಲನೆ ಮಾಡಿದರೆ ವಾಸನೆ ಗ್ರಹಿಸುವ ಶಕ್ತಿ ಆಕೆಗೆ ಜಾಸ್ತಿ ಇದೆಯಂತೆ. ಜೊತೆಗೆ ಕತ್ತಲೆಯಲ್ಲಿಯೂ ಆಕೆ ಸ್ಪಷ್ಟವಾಗಿ ನೋಡಬಲ್ಲಳಂತೆ. ನಾಯಿ ಕಂಡರೆ ಭಯವಂತೆ.

ನಾನೋ ತನ್ನ ಆತ್ಮೀಯರ ಜೊತೆ ಬೆಕ್ಕಿನ ಭಾಷೆಯಲ್ಲಿ ಮಾತನಾಡುತ್ತಾಳೆ. ಜೀವನ ಪೂರ್ತಿ ಬೆಕ್ಕಾಗಿಯೇ ಇರಲು ನಾನೋ ಬಯಸುತ್ತಾಳಂತೆ. ಅನುವಂಶಿಕ ದೋಷವಿದೆ ಎಂದಿದ್ದಾಳೆ ನಾನೋ. ನೀರೆಂದರೆ ತನಗೆ ಅಲರ್ಜಿ ಎಂದಿದ್ದಾಳೆ. ಆದ್ರೆ ಆಕೆಯ ರೋಗವನ್ನು ಗುಣಪಡಿಸಬಹುದು ಎನ್ನುತ್ತಾರೆ ಮನೋವೈದ್ಯರು.

ಯುಟ್ಯೂಬ್ ನಲ್ಲಿ ನಾನೋ ಹಾಕಿರುವ ವಿಡಿಯೋವನ್ನು ದಶಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...