alex Certify
ಕನ್ನಡ ದುನಿಯಾ       Mobile App
       

Kannada Duniya

ಹಣಕ್ಕಾಗಿ ಮಾರಾಟವಾಗ್ತಿದ್ದಾರೆ ಆಂಧ್ರ ಯುವತಿಯರು

woman-jail-istock ap

ವಿದೇಶದಲ್ಲಿ ಕೆಲಸ, ಕೈತುಂಬ ಸಂಬಳ ಎಂದರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಕೊಲ್ಲಿ ದೇಶಗಳಿಗೆ ಮನೆ ಕೆಲಸ ಸೇರಿದಂತೆ ವಿವಿಧ ಕೆಲಸಕ್ಕಾಗಿ ಹೋಗುವ ಹೆಣ್ಣುಮಕ್ಕಳು ಉದ್ಯೋಗದಾತರ ಕೈಗೆ ಸಿಕ್ಕು ನರಳುತ್ತಿದ್ದಾರೆ.

ಆಂಧ್ರ ಪ್ರದೇಶದ ಯುವತಿಯರು ಬಹರೇನ್, ಯು.ಎ.ಇ., ಕುವೈತ್ ನಲ್ಲಿ 1 ರಿಂದ 2 ಲಕ್ಷ ರೂಪಾಯಿಗೆ, ಸೌದಿ ಅರೇಬಿಯಾದಲ್ಲಿ 4 ಲಕ್ಷ ರೂಪಾಯಿಗೆ ಮಾರಾಟವಾಗುತ್ತಿದ್ದಾರೆ. ಕೆಲಸಕ್ಕಾಗಿ ಗಲ್ಫ್ ಕಂಟ್ರಿಗಳಿಗೆ ಹೋದ ಹೆಣ್ಣುಮಕ್ಕಳಿಗೆ ಉದ್ಯೋಗ ನೀಡಿದವರು ಸರಿಯಾಗಿ ವೇತನ ಕೊಡದೇ ಚಿಲ್ಲರೆ ಅಂಗಡಿಗಳಲ್ಲಿ ಸಾಮಾನು ಮಾರಾಟ ಮಾಡುವಂತೆ ಅವರನ್ನು ಮಾರಾಟ ಮಾಡುತ್ತಿದ್ದಾರೆ. ಇಂತಹ ಮಹಿಳೆಯರು ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ವೇತನ ಸಿಗದೇ, ದೈಹಿಕ, ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ಅನುಭವಿಸುತ್ತಾ ಆಂಧ್ರದ ಹೆಣ್ಣು ಮಕ್ಕಳು, ಗಲ್ಪ್ ದೇಶಗಳಲ್ಲಿ ನಲುಗಿದ್ದಾರೆ. ವೀಸಾ ಅವಧಿ ಮುಗಿದ ಕಾರಣಕ್ಕೆ ಹಲವರು ಜೈಲುಗಳಲ್ಲಿ ಕೊಳೆಯುವಂತಾಗಿದೆ. ಅವರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕೆಂದು ಆಂಧ್ರ ಅನಿವಾಸಿ ಭಾರತೀಯರ ಕಲ್ಯಾಣ ಖಾತೆ ಸಚಿವ ಪಲ್ಲೆ ರಘುನಾಥ ರೆಡ್ಡಿ ಹೇಳಿದ್ದಾರೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದಿರುವ ರೆಡ್ಡಿ, ಕೊಲ್ಲಿ ರಾಷ್ಟ್ರಗಳಲ್ಲಿ ಹೆಚ್ಚಿನ ಭಾರತೀಯರು ಕಿರುಕುಳ ಅನುಭವಿಸುತ್ತಿದ್ದು, ಆಂಧ್ರದ ಹೆಣ್ಣುಮಕ್ಕಳು ಕೂಡ ಸೇರಿದ್ದಾರೆ. ಜೈಲಿನಲ್ಲಿ ಕೊಳೆಯುತ್ತಿರುವ ಹೆಣ್ಣು ಮಕ್ಕಳನ್ನೆಲ್ಲಾ ಪಾರು ಮಾಡಬೇಕೆಂದು ಕೋರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...