alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮೆರಾದಲ್ಲಿ ಸೆರೆಯಾಯ್ತು ಮಹಿಳೆಯ ದುರ್ನಡತೆ

us-dd

ನ್ಯೂಯಾರ್ಕ್: ಅಮೆರಿಕದಲ್ಲಿ ಮತ್ತೆ ಜನಾಂಗೀಯ ನಿಂದನೆ ಮರುಕಳಿಸಿದೆ. ಡಿಪಾರ್ಟ್ ಮೆಂಟಲ್ ಸ್ಟೋರ್ ನಲ್ಲಿ ಅಮೆರಿಕದ ಮಹಿಳೆಯೊಬ್ಬಳು ಭಾರತೀಯರನ್ನು ಅವರ ದೇಶಕ್ಕೆ ವಾಪಸ್ ಕಳಿಸಿ ಎಂದು ರೇಗಾಡಿದ್ದಾಳೆ.

ನ್ಯೂಜೆರ್ಸಿಯ ನ್ಯೂ ಬ್ರನ್ಸ್ ವಿಕ್ ಡಿಪಾರ್ಟ್ ಮೆಂಟಲ್ ಸ್ಟೋರ್ ನಲ್ಲಿ ಭಾರತೀಯ ಮೂಲದ ಲ್ಯಾಟಿನ್ ಅಮೆರಿಕ ದಂಪತಿ ವಸ್ತುಗಳನ್ನು ಖರೀದಿಸಿ ಬಿಲ್ ಕಟ್ಟಲು ಕ್ಯೂನಲ್ಲಿ ನಿಂತಿದ್ದು, ಅವರ ಹಿಂದೆ ಅಮೆರಿಕದ ಮಹಿಳೆ ನಿಂತಿದ್ದಾಳೆ.

ಅದೇ ಶಾಪ್ ನಲ್ಲಿ ಭಾರತೀಯ ಯುವಕನೊಬ್ಬ ಕೆಲಸ ಮಾಡಿಕೊಂಡಿದ್ದಾನೆ. ಆತನ ಬಳಿ ದಂಪತಿ ನಿಂತಿದ್ದು, ಸಾಲು ಕಡಿಮೆಯಾಗದ ಕಾರಣ ಮಹಿಳೆ ಏರಿದ ದನಿಯಲ್ಲಿ ಮಾತನಾಡಿದ್ದಾಳೆ.

ಭಾರತೀಯರನ್ನು ಅವರ ದೇಶಕ್ಕೆ ಕಳಿಸಿ ಎಂದೆಲ್ಲಾ ಕೂಗಾಡಿದ್ದಾಳೆ. ಶಾಪ್ ಸಿಬ್ಬಂದಿ ಆಕೆಯನ್ನು ಸಮಾಧಾನಪಡಿಸಲು ಯತ್ನಿಸಿದರೂ, ಕೇಳಿಸಿಕೊಳ್ಳುವ ತಾಳ್ಮೆ ಆಕೆಗಿರಲಿಲ್ಲ. ನಿಂದನೆ ಮಾಡಿ ಅಲ್ಲಿಂದ ತೆರಳಿದ್ದಾಳೆ. ಮಹಿಳೆಯ ದುರ್ನಡತೆಗೆ ಶಾಪ್ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...