alex Certify
ಕನ್ನಡ ದುನಿಯಾ       Mobile App
       

Kannada Duniya

ಗೂಗಲ್ ಮ್ಯಾಪ್ಸ್ ನಿಂದಾಗಿ ಮನೆ ಕಳೆದುಕೊಂಡ ಮಹಿಳೆ

house demolishedಅಪರಿಚಿತ ಸ್ಥಳಗಳಿಗೆ ಪ್ರಯಾಣಿಸುವ ವೇಳೆ ಬಹುತೇಕರು ಗೂಗಲ್ ಮ್ಯಾಪ್ಸ್ ಬಳಸುತ್ತಾರೆ. ಟ್ರಾಫಿಕ್ ಕುರಿತ ಮಾಹಿತಿ ಪಡೆಯಲೂ ಗೂಗಲ್ ಮ್ಯಾಪ್ಸ್ ನೆರವಾಗುತ್ತದೆ. ಆದರೆ ಗೂಗಲ್ ಮ್ಯಾಪ್ ಕಾರಣಕ್ಕಾಗಿ ಮಹಿಳೆಯೊಬ್ಬಳು ತನ್ನ ಮನೆಯನ್ನೇ ಕಳೆದುಕೊಂಡಿದ್ದಾಳೆ.

ಅಮೆರಿಕಾದ ಟೆಕ್ಸಾಸ್ ನಲ್ಲಿ ಈ ಘಟನೆ ನಡೆದಿದ್ದು, ಕಳೆದ ವರ್ಷ ಬಂದ ಭಾರೀ ಬಿರುಗಾಳಿಯಿಂದಾಗಿ ಕೆಲ ಕಟ್ಟಡಗಳು ಉರುಳಿ ಬಿದ್ದಿದ್ದರೆ, ಹಲವು ಮನೆಗಳು ಬಿರುಕು ಬಿಟ್ಟಿದ್ದವು. ಇಂತಹ ಬಿರುಕು ಬಿಟ್ಟ ಮನೆಗಳನ್ನು ಪರೀಕ್ಷಿಸಿದ್ದ ತಜ್ಞರ ತಂಡ ಸುರಕ್ಷತೆಯ ದೃಷ್ಟಿಯಿಂದ ತೀರಾ ದುಃಸ್ಥಿತಿಯಲ್ಲಿದ್ದ ಮನೆಗಳನ್ನು ಕೆಡವಲು ಸಲಹೆ ನೀಡಿತ್ತು. ಈ ಕಾರ್ಯವನ್ನು ಸಂಸ್ಥೆಯೊಂದಕ್ಕೆ ನೀಡಲಾಗಿತ್ತು.

ಲಿಂಡ್ಸೆ ಡಯಾಜ್ ಎಂಬಾಕೆಯ ಡುಪ್ಲೆಕ್ಸ್ ಮನೆ ಬಿರುಕು ಬಿಟ್ಟಿದ್ದರೂ ಅಡಿಪಾಯ ಗಟ್ಟಿಯಾಗಿದ್ದ ಕಾರಣ ತಜ್ಞರು ಈ ಮನೆಯನ್ನು ಬೀಳಿಸುವ ಅಗತ್ಯವಿಲ್ಲವೆಂದು ಹೇಳಿದ್ದರು. ಇತ್ತೀಚೆಗೆ ಲಿಂಡ್ಸೆ ಡಯಾಜ್ ಹೊರಗೆ ಹೋಗಿದ್ದ ವೇಳೆ, ಕಟ್ಟಡ ಬೀಳಿಸುವ ಗುತ್ತಿಗೆ ಪಡೆದಿದ್ದ ಸಂಸ್ಥೆ, ಗೂಗಲ್ ಮ್ಯಾಪ್ಸ್ ತಪ್ಪಾಗಿ ಸ್ಥಳ ತೋರಿಸಿದ ಕಾರಣಕ್ಕಾಗಿ ಮತ್ತೊಂದು ಬ್ಲಾಕ್ ನಲ್ಲಿದ್ದ ಡುಪ್ಲೆಕ್ಸ್ ಮನೆಯನ್ನು ಬೀಳಿಸುವ ಬದಲು ಗಟ್ಟಿಮುಟ್ಟಾಗಿದ್ದ ಲಿಂಡ್ಸೆ ಡಯಾಜ್ ಳ ಮನೆಯನ್ನು ನೆಲಸಮ ಮಾಡಿದೆ. ಗೂಗಲ್ ಸಂಸ್ಥೆ, ಮ್ಯಾಪ್ ನಲ್ಲಿ ಈಗ ತಪ್ಪನ್ನು ಸರಿ ಮಾಡಿದ್ದರೂ ಲಿಂಡ್ಸೆ ಮನೆ ಕಳೆದುಕೊಳ್ಳುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...