alex Certify
ಕನ್ನಡ ದುನಿಯಾ       Mobile App
       

Kannada Duniya

ಲೆನ್ಸ್ ಬಳಸುವವರು ಓದಲೇಬೇಕಾದ ಸುದ್ದಿ…!

ಲಂಡನ್ ನಲ್ಲಿ 42 ವರ್ಷದ ಮಹಿಳೆಗೆ ಸುಮಾರು ಮೂರು ದಶಕಗಳಿಂದಲೂ ಕಣ್ಣು ನೋವು ಇತ್ತು. ಹಲವು ಬಾರಿ ವೈದ್ಯರನ್ನು ಭೇಟಿ ಮಾಡಿದ್ರೂ ಪ್ರಯೋಜನವಾಗಿರಲಿಲ್ಲ. ಇತ್ತೀಚಿಗೆ ವೈದ್ಯರು ಎಂ.ಆರ್.ಐ. ಸ್ಕ್ಯಾನ್ ಮಾಡಿದ್ರು. ಸ್ಕ್ಯಾನ್ ವರದಿ ರೋಗಿಯ ಕುಟುಂಬಸ್ಥರನ್ನು ತಲ್ಲಣಗೊಳಿಸಿದೆ.

ಮಹಿಳೆಯ ಸ್ಕ್ಯಾನ್ ರಿಪೋರ್ಟ್ ನಲ್ಲಿ ಎಡಗಣ್ಣಿನ ಮೇಲ್ಭಾಗದಲ್ಲಿ ಲೆನ್ಸ್ ಇರೋದು ಗೋಚರಿಸಿದೆ. ಲೆನ್ಸ್ ಕಣ್ಣಿನ ಮೇಲ್ಭಾಗಕ್ಕೆ ಹೇಗೆ ಹೋಯಿತು ಎಂಬುದೇ ರೋಗಿಯ ತಲೆ ಕೆಡಿಸಿತು. ವೈದ್ಯರು, ಯುವತಿಯ ಕಣ್ಣಿನ ಮೇಲೆ ಇದ್ದ ಲೆನ್ಸ್ ನ್ನು ಶಸ್ತ್ರ ಚಿಕಿತ್ಸೆ ಮಾಡಿ ತೆಗೆದ್ರು.

ಕೆಲವು ದಿನಗಳು ಈ ಬಗ್ಗೆ ಯೋಚಿಸಿದಾಗ ಇದರ ಹಿಂದಿನ ಸತ್ಯ ಬಯಲಾಗಿದೆ. ಯುವತಿ ತನ್ನ 14ನೇ ವಯಸ್ಸಿನಲ್ಲಿ ಕಣ್ಣು ಸರಿಯಾಗಿ ಕಾಣದ ಹಿನ್ನೆಲೆಯಲ್ಲಿ ಲೆನ್ಸ್ ಹಾಕಿಕೊಳ್ಳುತ್ತಿದ್ದಳು. ಒಂದು ದಿನ ಬ್ಯಾಡ್ಮಿಂಟನ್ ಆಡುವಾಗ ಬ್ಯಾಡ್ಮಿಂಟನ್ ರಾಕೆಟ್ ಯುವತಿಯ ಕಣ್ಣಿಗೆ ಬಡಿದಿದೆ. ಆಗಿನಿಂದಲೂ ಅವಳಿಗೆ ಕಣ್ಣು ನೋವು ಬಂದ ಕಾರಣ, ಲೆನ್ಸ್ ಬಳಸೋದನ್ನೆ ಬಿಟ್ಟಿದ್ದಳು. ಆದರೆ ಲೆನ್ಸ್ ಮಾತ್ರ ಮೇಲ್ಬಾಗಕ್ಕೆ ಹೋಗಿ ಕುಳಿತಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...