alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರಿನ ಬಾನೆಟ್ ತೆರೆದು ಕಂಗಾಲಾದ ಮಹಿಳೆ…!

ಅಮೆರಿಕದ ವಿಸ್ಕಾನ್ಸಿಸ್ ಪ್ರಾಂತ್ಯದ ಓಮ್ರೋ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ವಿಚಿತ್ರವಾದ ಘಟನೆ ನಡೆದಿದೆ. ಮಹಿಳೆಯೊಬ್ಬರ ಕಾರು ವಿಚಿತ್ರವಾಗಿ ವರ್ತಿಸುತ್ತಿತ್ತು. ಇದ್ದಕ್ಕಿದ್ದ ಹಾಗೆ ಅವರಿಗೆ ಕಾರಿನಲ್ಲಿ ಯಾವುದೋ ಶಕ್ತಿ ಸೇರಿಕೊಂಡಿದೆ ಎಂಬಂತೆ ಭಾಸವಾಗುತ್ತಿತ್ತು.

ಒಂದಷ್ಟು ದಿನ ಹಾಗೆ ಕಾರಿನಲ್ಲಿ ಓಡಾಡ್ತಿದ್ದ ಆಕೆಗೆ ಕಾರಿನಲ್ಲಿ ವಿಚಿತ್ರ ಅನುಭವಗಳಾಗ್ತಿತ್ತು. ಕೊನೆಗೆ ಅವರು ಕಾರಿನಲ್ಲಿ ಏನಿದೆ ಅಂತ ನೋಡೋದಕ್ಕೆ ಮುಂದಾದಾಗ ನಿಜಕ್ಕೂ ಆಕೆ ಶಾಕ್ ಆಗಿಬಿಟ್ಟಿತ್ತು, ಯಾಕಂದ್ರೆ ಕಾರಿನಲ್ಲಿದ್ದದ್ದು ಹೆಬ್ಬಾವು. ಹೌದು ಕಾರಿನಲ್ಲಿ ಏನಾದ್ರು ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ಯಾ ಅಂತ ಆಕೆ ಚೆಕ್ ಮಾಡೋದಕ್ಕೆ ಬಾನೆಟ್ ತೆರೆದಾಗ ಆಕೆಗೆ ಅಲ್ಲಿ ದೈತ್ಯಗಾತ್ರದ ಹೆಬ್ಬಾವು ಕಾಣಿಸಿದೆ. ಕೂಡಲೇ ಆಕೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಇಬ್ಬರು ಪೊಲೀಸರಿಗೆ ಹಾವನ್ನು ಹೊರಗೆಳೆಯೋಕೆ ಸಾಧ್ಯವಾಗಿಲ್ಲ. ಹಾಗಾಗಿ ಅವರು ಮೆಕ್ಯಾನಿಕ್ ಒಬ್ಬನ ಸಹಾಯದ ಮೂಲಕ ಕಾರಿನ ಪಾರ್ಟ್ಗಳನ್ನ ತೆಗೆದು ಹಾವು ಹಿಡಿಯುವವರನ್ನು ಕರೆಸಿ ಹೆಬ್ಬಾವನ್ನು ಹೊರಗೆಳೆದಿದ್ದಾರೆ. ಈ ಘಟನೆಯ ಫೋಟೋಗಳನ್ನ ಆನಂತರ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆಯ ಪೂರ್ವಾಪರವನ್ನು ತಿಳಿದ ಮಂದಿ ಕೂಡ ಶಾಕ್ ಆಗಿದ್ದಾರೆ.

ನಾಲ್ಕು ಅಡಿ ಉದ್ದವಿದ್ದ ಈ ಹೆಬ್ಬಾವನ್ನ ವ್ಯಕ್ತಿಯೊಬ್ಬರು ಸಾಕಿದ್ದರಂತೆ . ಅಲ್ಲಿಂದ ಹಾವು ಎಸ್ಕೇಪ್ ಆಗಿತ್ತಂತೆ. ವಿಷಕಾರಿ ಪ್ರಾಣಿಗಳನ್ನು ಸಾಕೋದು ಕಾನೂನುಬಾಹಿರವಾದ್ದರಿಂದ ಮಾಲೀಕನಿಗೆ ಹಾವನ್ನು ಹಿಂತಿರುಗಿಸದೆ ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆದುಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...