alex Certify
ಕನ್ನಡ ದುನಿಯಾ       Mobile App
       

Kannada Duniya

ಖಿನ್ನತೆಯಿಂದ ಹೊರ ಬರಲು ನೆರವಾಗಿದೆ ಈ ಹವ್ಯಾಸ

ಈಕೆ ಶ್ವಾನಪ್ರಿಯರಿಗೆ ಹಾಗೂ ಶ್ವಾನಗಳಿಗೆ ನೆರವಾಗುವ ಮೂಲಕ ಅವರಿಗೆ ಆಪತ್ಬಾಂಧವರಂತಾಗಿರುವುದು ಮಾತ್ರವಲ್ಲ, ತನ್ನ ರೋಗಕ್ಕೂ ಮದ್ದು ಕಂಡುಕೊಂಡಿದ್ದಾರೆ.

ಸ್ಕಾಟ್ಲೆಂಡ್‌ನ ಮಾಜಿ ಪೊಲೀಸ್ ಅಧಿಕಾರಿ, ಎಲೈನ್ ವಾರ್‌ಬರ್ಟನ್ ಎಂಬ ಮಹಿಳೆ ಶ್ವಾನಪ್ರಿಯರು ಮನೆಬಿಟ್ಟು ದೀರ್ಘ ರಜೆ ಮೇಲೆ ಹೊರ ಹೋಗಬೇಕಾದಾಗ ಅವರ ನಾಯಿಗೆ ತಾತ್ಕಾಲಿಕ ಆರೈಕೆಗೆ ಮತ್ತೊಂದು ಮನೆ ವ್ಯವಸ್ಥೆ ಮಾಡುವ ಬಿಸಿನೆಸ್ ಮಾಡೆಲ್ ರೂಪಿಸಿದ್ದಾರೆ.

ಇದರಿಂದ ಶ್ವಾನಪ್ರಿಯರಿಗೆ ತಮ್ಮ ನಾಯಿಗೆ ತಾತ್ಕಾಲಿಕ ಆಶ್ರಯ ಸಿಕ್ಕ ಸಂತೋಷ ಹಾಗೂ ಬೇರೆ ಮನೆಯವರಿಗೆ ತಾತ್ಕಾಲಿಕವಾಗಿ ನಾಯಿ ಸಾಕಿದ ಖುಷಿ ಸಿಗುತ್ತದೆ.

ವಿಶೇಷವೆಂದರೆ ಎಲೈನ್ ಇದನ್ನು ಜಗತ್ತಿನ ಶ್ರೇಷ್ಠ ಕೆಲಸ ಎಂದು ಭಾವಿಸಿದ್ದಾರೆ. ಮಾತ್ರವಲ್ಲ ಈ ಮೂಲಕವೇ ಇವರು ತಮ್ಮ ಸುದೀರ್ಘ ಕಾಲದ ಖಿನ್ನತೆಯಿಂದ ಹೊರಬರಲು ಸಾಧ್ಯವಾಗಿದೆ ಎಂದು ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮುಂದುವರೆಯಲಿದೆಯಾ ದೋಸ್ತಿ ಸರ್ಕಾರ...?

    View Results

    Loading ... Loading ...