alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನ ನಾಯಿ ಸಸ್ಯಾಹಾರಿ ಎಂದು ನಿರೂಪಿಸಲು ಹೋಗಿ ಮುಖಭಂಗಕ್ಕೊಳಗಾದ ಯುವತಿ

ತಾನು ಸಾಕಿರುವ ನಾಯಿ ಕೇವಲ ಸಸ್ಯಾಹಾರವನ್ನೇ ಸೇವಿಸುತ್ತದೆ ಎಂದಿದ್ದ ಯುವತಿಯ ಮಾತಿಗೆ ವ್ಯತಿರಿಕ್ತವಾಗಿ ಬ್ರಿಟನ್ ಟಿವಿ ಶೋ ನೇರ ಪ್ರಸಾರದಲ್ಲೆ ಸುಳ್ಳೆಂಬುದು ಸಾಬೀತಾಗಿ ಆಕೆ ಮುಖಭಂಗ ಅನುಭವಿಸಿದ್ದಾಳೆ.

ಹಸಿರು ತರಕಾರಿಯನ್ನೇ ಸೇವಿಸುತ್ತದೆ ಎನ್ನಲಾಗಿದ್ದ ಸ್ಟೋರ್ಮ್ ಹೆಸರಿನ ನಾಯಿ ಮಾಂಸಾಹಾರವನ್ನೇ ಆಯ್ಕೆ ಮಾಡಿಕೊಂಡಿದೆ. ದೇಶದಲ್ಲಿ ತಾಪಮಾನ ಹೆಚ್ಚಾದ ಕಾರಣ ಆಹಾರ ಸೇವನೆಯನ್ನು ಕಡಿಮೆ ಮಾಡಿದ್ದ ವೈಟ್ ಸೆರ್ಬಿಯನ್ ತಳಿಯ ನಾಯಿಗೆ ಲೂಸಿ ಕ್ಯಾರಿಂಗ್ಟನ್, ಮಾಂಸಾಹಾರ ನಿಲ್ಲಿಸಿ ಸಸ್ಯಾಹಾರವನ್ನೇ ನೀಡುತ್ತಿದ್ದಳು.

ಹೀಗಾಗಿ ಆಕೆ ಸಸ್ಯಾಹಾರಿ ಪದಾರ್ಥವನ್ನೇ ನೀಡಲು ಶುರು ಮಾಡಿದ ನಂತರ ಸ್ಟೋರ್ಮ್ ಆರೋಗ್ಯ ಚೇತರಿಸಿಕೊಂಡಿತ್ತು ಎಂದು ಹೇಳಿಕೊಂಡಿದ್ದಳು. ಇದನ್ನು ನಿರೂಪಿಸುವ ಸಲುವಾಗಿ ಟಿವಿ ಶೋನಲ್ಲಿ‌ ಪಾಲ್ಗೊಂಡಿದ್ದ ವೇಳೆ ಸ್ಟೋರ್ಮ್ ಎದುರು ಎರಡು ಬೌಲ್ ಇಡಲಾಗಿತ್ತು. ಒಂದರಲ್ಲಿ ಮಾಂಸ ಸೇರಿಸಿದ ಆಹಾರ, ಮತ್ತೊಂದರಲ್ಲಿ ತರಕಾರಿ ಇಡಲಾಗಿತ್ತು.

ತನ್ನ ಸ್ಟೋರ್ಮ್ ಸಸ್ಯಾಹಾರವನ್ನೇ ಸೇವಿಸುತ್ತದೆ ಎಂಬ ದೃಢ ವಿಶ್ವಾಸದಲ್ಲಿದ್ದ ಲೂಸಿಗೆ ಶಾಕ್ ಕಾದಿತ್ತು. ತರಕಾರಿಯ ಕಡೆ ಕಣ್ಣೂ ಹಾಯಿಸದ ಸ್ಟೋರ್ಮ್ ನೇರವಾಗಿ ಮಾಂಸಾಹಾರಿ ಬೌಲ್ ಕಡೆ ಸಾಗಿ, ತಿಂದು ತೇಗಿತು. ಟಿವಿ ಶೋ ಪ್ರಸಾರವಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಕುರಿತು‌ ವ್ಯಂಗ್ಯ ಮಾಡಲಾಗುತ್ತಿದೆ. ನಾಯಿಗೆ ಅವಶ್ಯಕ ಮಾಂಸಾಹಾರ ನೀಡದೆ ನಿರ್ಬಂಧಿಸಿದ್ದನ್ನು ಕೆಲವರು ಪ್ರಾಣಿ ಹಿಂಸೆ ಎಂದೂ ಹೇಳಿ ಆಕ್ರೋಶ ಹೊರಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...