alex Certify
ಕನ್ನಡ ದುನಿಯಾ       Mobile App
       

Kannada Duniya

18 ಆಪರೇಶನ್ ಗಳ ಬಳಿಕ ಹೇಗಿದ್ದವಳು ಹೇಗಾಗಿದ್ದಾಳೆ ಗೊತ್ತಾ?

ತೀವ್ರವಾದ ಮುಖದ ವಿರೂಪತೆಯಿಂದ ಬಳಲಿದ್ದ ಮಹಿಳೆಯ ಬದುಕಲ್ಲಿ ಕೊನೆಗೂ ಸಂತಸದ ಕ್ಷಣಗಳು ಬಂದಿವೆ. 25 ವರ್ಷದ ಕಾಡಿ ಹಾಲ್, ತನ್ನ ಪ್ರಿಯಕರ ಲೂಯಿಸ್ ಹಾಲ್ಟ್ ನನ್ನು ಮದುವೆಯಾಗಿದ್ದಾಳೆ.

1992ರಲ್ಲಿ ಕಾಡಿ ಜನಿಸಿದ್ಲು. ಆಗ ಆಕೆಯ ಮುಖ ನೋಡಿದ್ರೆ ಎಂಥವರು ಕೂಡ ಹೆದರಿ ಬಿಡುತ್ತಿದ್ರು, ಮುಖದ ಎಡಭಾಗದಲ್ಲಿ ವಿಚಿತ್ರವಾದ ಕಲೆಗಳೇ ತುಂಬಿಕೊಂಡಿದ್ವು. ಆರಂಭದಲ್ಲಿ ವೈದ್ಯರು ಕೂಡ ಅದಕ್ಕೆ ಚಿಕಿತ್ಸೆಯಿಲ್ಲ, ಜೀವನಪೂರ್ತಿ ಆಕೆ ಅದೇ ರೀತಿ ಇರಬೇಕಾಗುತ್ತದೆ ಅಂತಾ ಹೇಳಿದ್ರು.

ಆದ್ರೆ ಕಾಡಿ ಹೆತ್ತವರು ಸುಮ್ಮನಾಗಲಿಲ್ಲ. ಕೊನೆಗೂ ಅಮೆರಿಕದ ವೈದ್ಯರೊಬ್ಬರು ಆಕೆಗೆ ಚಿಕಿತ್ಸೆ ನೀಡಲು ಒಪ್ಪಿಕೊಂಡ್ರು. ಮಗಳ ಚಿಕಿತ್ಸೆಗಾಗಿ ದಂಪತಿ ದಾನಿಗಳಿಂದ 230,000 ಪೌಂಡ್ ಹಣದ ನೆರವು ಪಡೆದುಕೊಂಡ್ರು. ನಂತರ 14 ವರ್ಷಗಳಲ್ಲಿ ಕಾಡಿ ಹಾಲ್ ಗೆ 18 ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ.

ಕಣ್ಣು, ಕೆನ್ನೆ, ಗಲ್ಲ ಹೀಗೆ ಎಲ್ಲಾ ಕಡೆ ಇದ್ದ ವಿರೂಪತೆಯನ್ನು ವೈದ್ಯರು ಸರ್ಜರಿ ಮೂಲಕ ಮಾಯ ಮಾಡಿದ್ದಾರೆ. ಕಾಡಿ ಹಾಲ್ ಈಗ ಸುಂದರವಾಗಿ ಕಾಣಿಸುತ್ತಿದ್ದಾಳೆ. ಹಳೆಯ ವಿಕಾರವಾದ ಯಾವ ಲಕ್ಷಣಗಳೂ ಇಲ್ಲ. 8 ವರ್ಷಗಳಿಂದ ಲೂಯಿಸ್ ಹಾಗೂ ಕಾಡಿ ಪ್ರೀತಿಸ್ತಾ ಇದ್ರು. ಈಗ ಹೊಸ ಬದುಕಿಗೆ ಅಡಿಯಿಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...