alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯ ಡೇಟಿಂಗ್ ಆಫರ್ ಗೆ 6 ವರ್ಷಗಳ ಬಳಿಕ ಬಂದಿದೆ ರೆಸ್ಪಾನ್ಸ್, ಆದ್ರೆ….

ಹದಿಹರೆಯದಲ್ಲಿ ನನಗೂ ಒಬ್ಬ ಬಾಯ್ ಫ್ರೆಂಡ್ ಬೇಕು ಅನ್ನೋ ಆಸೆ ಯುವತಿಯರಲ್ಲಿ ಮೂಡೋದು ಸಹಜ. ಹ್ಯಾಲಿ ರಾಬಿನ್ಸ್ ಕೂಡ ಅಂಥದ್ದೇ ರೊಮ್ಯಾಂಟಿಕ್ ಬದುಕಿನ ಕನಸು ಕಾಣುತ್ತಿದ್ಲು. 6 ವರ್ಷಗಳ ಹಿಂದೆ ತನ್ನ ಅದೃಷ್ಟ ಹೇಗಿದೆ ಅಂತಾ ಪರೀಕ್ಷಿಸಲು  ಹ್ಯಾಲಿ ವಿಚಿತ್ರ ಕೆಲಸವೊಂದನ್ನು ಮಾಡಿದ್ಲು.

ಕ್ಯೂಟ್ ಆಗಿರೋ ಯುವಕರು ಡೇಟಿಂಗ್ ಮಾಡಲು ನನ್ನನ್ನು ಸಂಪರ್ಕಿಸಿ ಅಂತಾ ಚೆಂಡಿನ ಮೇಲೆ ಬರೆದು ಅದನ್ನು ಸಮುದ್ರಕ್ಕೆ ಎಸೆದಿದ್ಲು. 6 ವರ್ಷಗಳ ಹಿಂದಿನ ಈ ವಿಚಾರವನ್ನೇ ಹ್ಯಾಲಿ ಮರೆತುಬಿಟ್ಟಿದ್ಲು. ಆದ್ರೀಗ ತನಗೆ ಆ ಚೆಂಡು ಸಿಕ್ಕಿದೆ ಅಂತಾ ಆ್ಯಡಂ ಎಂಬಾತ ಕರೆ ಮಾಡಿದ್ದ.

ಹ್ಯಾಲಿಗೆ ಅದನ್ನು ನಂಬಲು ಸಾಧ್ಯವಾಗಲಿಲ್ಲ. ಇಲ್ಲೂ ಒಂದು ಟ್ವಿಸ್ಟ್ ಇದೆ, ಅಸಲಿಗೆ ಹ್ಯಾಲಿಯ ಅದೃಷ್ಟ ಕೈಕೊಟ್ಟಿದೆ. ಆ ಚೆಂಡು ಕ್ಯೂಟ್ ಆಗಿರೋ ಯುವಕನ ಕೈಸೇರುವ ಬದಲು ಯುವತಿಗೆ ಸಿಕ್ಕಿದೆ. ಆ್ಯಡಂ ಎಂದು ಹೇಳಿಕೊಂಡಿರುವವಳು ಆ್ಯಶ್ಲೆ ಎಂಬ ಯುವತಿ. ಹಾಗಾಗಿ ಅವಳ ಜೊತೆ ಡೇಟಿಂಗ್ ಹೋಗಲು ಸಾಧ್ಯವಿಲ್ಲ, ಆದ್ರೆ ಇಬ್ಬರೂ ಒಳ್ಳೆ ಸ್ನೇಹಿತೆಯರಾಗಿರೋದಾಗಿ ಹ್ಯಾಲಿ ತಿಳಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...