alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಮ್ ಮಾಡುವವರು ತಪ್ಪದೇ ಗಮನಿಸಬೇಕಾದ ಸುದ್ದಿ

ಬ್ರೆಜಿಲ್ ನ ಕಾನೂನು ವಿದ್ಯಾರ್ಥಿನಿ ಮಾರ್ಸೆಲ್ ಮ್ಯಾಂಕಸೊ ಎಂದಿನಂತೆ ಜಿಮ್ ಮಾಡಲು ತೆರಳಿದ್ಲು. ವಾರ್ಮ್ ಅಪ್ ವರ್ಕೌಟ್ ಬಳಿಕ ಸಿಟ್ ಅಪ್ಸ್ ಶುರು ಮಾಡಿದ್ದಾಳೆ. ಮಧ್ಯದಲ್ಲಿ ಆಕೆಯ ಕಾಲುಗಳಿಗೆ ಆಧಾರವಾಗಿದ್ದ ಸ್ಟ್ರಾಪ್ ತುಂಡಾಗಿದೆ.

ಯುವತಿ ಮೇಲಿನಿಂದ ಕೆಳಕ್ಕೆ ಬಿದ್ದಿದ್ದಾಳೆ. ಆಕೆಯ ತಲೆ ನೆಲಕ್ಕೆ ಅಪ್ಪಳಿಸಿದೆ. ಅಷ್ಟಾಗಿದ್ದೇ ತಡ ಆಕೆಯ ಕತ್ತಿನ ಕೆಳಭಾಗದಲ್ಲಿ ಸಂಪೂರ್ಣ ಚಲನೆಯೇ ಇರಲಿಲ್ಲ. ಮಾರ್ಸೆಲ್ ಗೆ ತಾತ್ಕಾಲಿಕ ಪಾರ್ಶ್ವವಾಯು ಉಂಟಾಗಿತ್ತು.

ಕಣ್ಣುಗಳನ್ನು ಆಚೀಚೆ ತಿರುಗಿಸಲು ಸಾಧ್ಯವಾಗುತ್ತಿತ್ತು. ಅದನ್ನು ಬಿಟ್ರೆ ದೇಹದ ಮತ್ಯಾವ ಅಂಗದಲ್ಲೂ ಚಲನೆ ಇರಲಿಲ್ಲ. ಕೂಡಲೇ ಅವಳನ್ನು ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಅದಾಗಿ 6 ತಿಂಗಳುಗಳ ಬಳಿಕ ನಿರಂತರ ಚಿಕಿತ್ಸೆ ಹಾಗೂ ಥೆರಪಿಯ ಫಲವಾಗಿ ಮಾರ್ಸೆಲ್ ಮತ್ತೆ ನಡೆದಾಡುವಂತಾಗಿದ್ದಾಳೆ.

ಆದ್ರೆ ಇನ್ ವರ್ಟೆಡ್ ಸಿಟ್ ಅಪ್ಸ್ ಮಾಡುವವರಿಗೆ ಎಚ್ಚರಿಕೆಯ ಕರೆಗಂಟೆ ಈ ಘಟನೆ. ನುರಿತ ತರಬೇತುದಾರರಿದ್ದಲ್ಲಿ ಮಾತ್ರ ಈ ಕಸರತ್ತನ್ನು ಮಾಡಬಹುದು ಅನ್ನೋದು ವೈದ್ಯರ ಸಲಹೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...