alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿ ಜೊತೆ ಸಂಬಂಧ ಬೆಳೆಸಿದ್ದ ಶಿಕ್ಷಕಿಗೆ ಕೋರ್ಟ್ ನೀಡಿತ್ತು ವಿಚಿತ್ರ ಶಿಕ್ಷೆ

ಕಲಿಕೆಯಲ್ಲಿ ತೊಂದರೆಯುಂಟು ಮಾಡುವ ಒಂದು ಕಾಯಿಲೆ ಡಿಸ್ಲೆಕ್ಸಿಯಾ. ಸ್ಕಾಟ್ಲ್ಯಾಂಡ್ ವಿದ್ಯಾರ್ಥಿಯೊಬ್ಬನಿಗೆ ಈ ಸಮಸ್ಯೆ ಕಾಡಿದೆ. ಈ ಕಾಯಿಲೆಯಿಂದ ಬಳಲುತ್ತಿರುವ 17 ವರ್ಷದ ವಿದ್ಯಾರ್ಥಿ ಜೊತೆ ಶಿಕ್ಷಕಿಯೊಬ್ಬಳು ಶಾರೀರಿಕ ಸಂಬಂಧ ಬೆಳೆಸಿದ್ದಾಳೆ. ಈ ವಿಷ್ಯವನ್ನು ಶಿಕ್ಷಕಿ ಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾಳೆ. ವಿಚಾರಣೆ ನಂತ್ರ ಕೋರ್ಟ್ ಶಿಕ್ಷಕಿಗೆ ನೀಡಿದ ಶಿಕ್ಷೆ ಕೇಳಿದ್ರೆ ಆಶ್ಚರ್ಯವಾಗುತ್ತೆ.

ಸಾಮಾಜಿಕ ಸಂಸ್ಥೆಯೊಡನೆ 6 ತಿಂಗಳುಗಳ ಕಾಲ ಮನೋವೈದ್ಯರ ಸಲಹೆಗಾರರಾಗಿ ಕೆಲಸ ಮಾಡುವಂತೆ ಕೋರ್ಟ್ ಸೂಚನೆ ನೀಡಿದೆ. ಆಪಿ ಸ್ಪ್ರಿಂಗ್ ಹೆಸರಿನ ಶಿಕ್ಷಕಿ 2012ರಲ್ಲಿ ವಿದ್ಯಾರ್ಥಿ ಜೊತೆ ಅರೆ ನಗ್ನ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಳು. ಇನ್ನೊಬ್ಬ ವಿದ್ಯಾರ್ಥಿ ಈ ಬಗ್ಗೆ ಶಾಲೆ ಪ್ರಿನ್ಸಿಪಾಲರಿಗೆ ಮಾಹಿತಿ ನೀಡಿದ್ದ.

ಡಿಸ್ಲೆಕ್ಸಿಯಾದಿಂದ ಬಳಲುತ್ತಿದ್ದ ವಿದ್ಯಾರ್ಥಿ ಜೊತೆ ಸಂಬಂಧ ಬೆಳೆಸಲು ಒಂದು ಕಾರಣವಿತ್ತಂತೆ. ಆತನ ಶಿಕ್ಷಣಕ್ಕೆ ನೆರವಾಗಲು ನಿರ್ಧರಿಸಿದ್ದ ಶಿಕ್ಷಕಿ ಈ ಕೆಲಸಕ್ಕೆ ಕೈ ಹಾಕಿದ್ದಳಂತೆ. ಘಟನೆ ನಡೆದ ನಂತ್ರ ಶಿಕ್ಷಕಿಯನ್ನು ಶಾಲೆಯಿಂದ ವಜಾ ಮಾಡಲಾಗಿತ್ತು.

ಸದ್ಯ ಸ್ವ ಉದ್ಯಮಿಯಾಗಿರುವ ಆಪಿ ಸ್ಪ್ರಿಂಗ್ ವ್ಯಾಪಾರಿಗಳಿಗೆ ಸಲಹೆಗಾರರಾಗಿ ಕೆಲಸ ಮಾಡ್ತಿದ್ದಾಳೆ. ಹಿಂದಿನ ಕಹಿ ಘಟನೆ ಮರೆತು ಮುಂದೆ ನಡೆಯುತ್ತಿದ್ದೇನೆ ಎಂದಿದ್ದಾಳೆ ಆಪಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...