alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಯೊಂದಿಗಿನ ಫೈಟ್ ವೇಳೆ ನೋಟು ನುಂಗಿದ್ಲು ಮಹಿಳೆ

woman-swallows-7000-dollars-in-desperate-bid-to-hide-cash-during-fight-with-husbandತಾನು ಕೂಡಿಟ್ಟಿದ್ದ ಹಣದ ಮೇಲೆ ಪತಿ ಕಣ್ಣು ಹಾಕಿದ ಎಂಬ ಕಾರಣಕ್ಕೆ ಆಕ್ರೋಶಗೊಂಡ ಕೊಲಂಬಿಯಾದ ಮಹಿಳೆಯೊಬ್ಬಳು ನೋಟುಗಳನ್ನೇ ನುಂಗಿದ ವಿಲಕ್ಷಣ ಘಟನೆ ನಡೆದಿದೆ. ಬಳಿಕ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ನೋಟುಗಳನ್ನು ಹೊರ ತೆಗೆದಿದ್ದಾರೆ.

ಪತಿಯೊಂದಿಗೆ ಪ್ರವಾಸಕ್ಕೆ ತೆರಳುವ ಆಸೆಯಿಂದ ಈ ಮಹಿಳೆ 7 ಸಾವಿರ ಡಾಲರ್ ಉಳಿತಾಯ ಮಾಡಿದ್ದು, ಅದು ಪತಿಗೆ ಕಾಣದಂತೆ ಮುಚ್ಚಿಟ್ಟಿದ್ದಳು. ಈ ವಿಚಾರ ಹೇಗೋ ಅರಿತ ಆಕೆಯ ಪತಿ ಹಣ ಕೊಡುವಂತೆ ಪೀಡಿಸಿದ್ದಾನೆ. ಆತ ಹಣ ಕಸಿದುಕೊಳ್ಳಲು ಮುಂದಾದ ವೇಳೆ ಆಕ್ರೊಶಗೊಂಡ ಮಹಿಳೆ ಅಷ್ಟೂ ಹಣವನ್ನು ನುಂಗಿ ಬಿಟ್ಟಿದ್ದಾಳೆ.

ಬಳಿಕ ಆಕೆಗೆ ಶಸ್ತ್ರ ಚಿಕಿತ್ಸೆ ನಡೆಸಿ ಕೆಲ ನೋಟುಗಳನ್ನು ತೆಗೆದರೆ ಮತ್ತಷ್ಟು ನೋಟುಗಳು ನೈಸರ್ಗಿಕ ವಿಧಾನದಲ್ಲಿ ಹೊರ ಬಂದಿವೆ. ಅಕ್ರಮವಾಗಿ ಹಣ ಸಾಗಿಸಲು ಮಹಿಳೆ ಆ ರೀತಿ ಮಾಡಿಲ್ಲವೆಂದು ಅಭಿಪ್ರಾಯಪಟ್ಟಿರುವ ವೈದ್ಯರು, ಪತಿ ಮೇಲಿನ ಸಿಟ್ಟನ್ನು ಈ ರೀತಿ ವ್ಯಕ್ತಪಡಿಸಿರಬಹುದೆಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...