alex Certify
ಕನ್ನಡ ದುನಿಯಾ       Mobile App
       

Kannada Duniya

20 ಗಂಟೆ ಮೊಬೈಲ್ ಗೆ ಅಂಟಿಕೊಂಡಿದ್ದವಳು ಆಸ್ಪತ್ರೆ ಸೇರಿದ್ಲು

ಫೋನಿಲ್ಲದೆ ದಿನ ಕಳೆಯಲ್ಲ ಎನ್ನುವ ಪರಿಸ್ಥಿತಿ ಈಗಿದೆ. ಎಲ್ಲರ ಕೈನಲ್ಲೂ ಮೊಬೈಲ್. ಗಂಟೆಗಟ್ಟಲೆ ಫೋನ್ ನಲ್ಲಿ ಮಾತನಾಡುವವರಿಗೇನು ಕಡಿಮೆಯಿಲ್ಲ. ನೀವು ಗಂಟೆಗಟ್ಟಲೆ ಫೋನ್ ಜೊತೆ ಕಾಲಕಳೆಯುವವರಲ್ಲಿ ಒಬ್ಬರಾಗಿದ್ದರೆ ಈ ಸುದ್ದಿಯನ್ನು ಅವಶ್ಯವಾಗಿ ಓದಿ.

ಚೀನಾದ ಮಹಿಳೆಯೊಬ್ಬಳಿಗೆ ಮೊಬೈಲ್ ಫೋನ್ ಮಾರಕವಾಗಿ ಪರಿಣಮಿಸಿದೆ. ಅನೇಕ ಗಂಟೆ ಫೋನ್ ನಲ್ಲಿರುತ್ತಿದ್ದ ಮಹಿಳೆ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ಗಂಭೀರ ರೋಗಕ್ಕೆ  ತುತ್ತಾಗಿದ್ದಾಳೆ. ಮಹಿಳೆ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದಳು. 20 ಗಂಟೆ ಫೋನ್ ಗೆ ಅಂಟಿಕೊಂಡಿದ್ದಳು.

ರೈಲು ನಿಲ್ದಾಣಕ್ಕೆ ಬರ್ತಿದ್ದಂತೆ ಮಹಿಳೆ ಮಾತನಾಡಲು, ನಡೆಯಲು ಕಷ್ಟವಾಗಿದೆ. ತಕ್ಷಣ ವೈದ್ಯರನ್ನು ಭೇಟಿ ಮಾಡಿದ್ದಾಳೆ. ಪರೀಕ್ಷೆ ನಡೆಸಿದ ವೈದ್ಯರು ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆದಿದೆ. ತಡವಾಗಿದ್ರೆ ಮಹಿಳೆ ಸಾವನ್ನಪ್ಪುತ್ತಿದ್ದಳು ಎಂದು ವೈದ್ಯರು ತಿಳಿಸಿದ್ದಾರೆ. 20 ಗಂಟೆಗಳ ಕಾಲ ಫೋನ್ ನಲ್ಲಿದ್ದುದು ಹಾಗೂ ಬಲ ಭಾಗಕ್ಕೆ ಒರಗಿಕೊಂಡಿದ್ದರಿಂದ ಈ ಸಮಸ್ಯೆ ಕಾಡಿದೆ ಎನ್ನುತ್ತಾರೆ ವೈದ್ಯರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...