alex Certify
ಕನ್ನಡ ದುನಿಯಾ       Mobile App
       

Kannada Duniya

ರತಿ ಕ್ರೀಡೆಯಲ್ಲಿದ್ದಾಗ ಮಂಚದ ಜತೆ ಬೆನ್ನೂ ಮುರಿಯಿತು…!

ಲಂಡನ್: ಗ್ರಹಚಾರ ಕೆಟ್ಟರೆ ಹುಲ್ಲು ಹಾವಾಗಿ ಕಚ್ಚುತ್ತದೆ ಎನ್ನುವುದಕ್ಕೆ ಇದೊಂದು ನೈಜ ಉದಾಹರಣೆ. ಕೊಂಡು ಮೂರೇ ದಿನವಾಗಿದ್ದ ಮಂಚದಲ್ಲಿ ಪ್ರಿಯಕರನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಮಂಚವೇ ಮುರಿದು ಬಿದ್ದು, ಆಕೆಯ ಸ್ವಾಧೀನವೇ ತಪ್ಪುವಂತಾಗಿದೆ.

ಬ್ರಿಟಿಷ್ ಮೂಲದ 46 ವರ್ಷದ ಕ್ಲೇರ್ ಬಸ್ಬಿ ಎಂಬಾಕೆ 56 ವರ್ಷದ ಪ್ರಿಯಕರನ ಜತೆ ಸೆಕ್ಸ್ ನಲ್ಲಿ ತೊಡಗಿದ್ದಾಗ ಈ ಘಟನೆ ನಡೆದಿದೆ. ಈಕೆ ಬರ್ಕ್ಷೈರ್ ಬೆಡ್ ಕಂಪನಿ ಲಿ.ನಿಂದ ಮಂಚ ಖರೀಸಿದ್ದಾಳೆ. ಈ ವೇಳೆ ಪ್ರಿಯಕರನ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಾಗ ಆಯಾಮ ಬದಲಾಯಿಸುವ ಉಮೇದು ಬಂದಿದ್ದು, ಅದೇ ಜೋಶ್ ನಲ್ಲಿರುವಾಗಲೇ ಮಂಚ ಮುರಿದು ಬಿದ್ದಿದ್ದಾರೆ.

ಈ ವೇಳೆ ಪ್ರಿಯಕರನಿಗೆ ಸಣ್ಣಪುಟ್ಟ ಗಾಯಗಳಾದರೂ, ಬಸ್ಬಿಗೆ ತೀವ್ರ ಪ್ರಮಾಣದಲ್ಲಿ ಪೆಟ್ಟು ಬಿದ್ದಿತ್ತು. ಸ್ಪೈನಲ್ ಕಾರ್ಡ್ (ಬೆನ್ನು ಮೂಳೆ) ಮುರಿತಕ್ಕೊಳಪಟ್ಟು ಈಗ ವೀಲ್ ಚೇರ್ ಸಹಾಯದಲ್ಲಿ ಜೀವನ ಕಳೆಯುವಂತಾಗಿದೆ.

ಹೀಗಾಗಿ ತನ್ನ ಈ ಸ್ಥಿತಿಗೆ ಬರ್ಕ್ಷೈರ್ ಬೆಡ್ ಕಂಪನಿ ಲಿ. ಕಾರಣ ಎಂದು ಲಂಡನ್ ಹೈಕೋರ್ಟ್ ನಲ್ಲಿ ದಾವೆ ಹೂಡಿರುವ ಬಸ್ಬಿ, ಪರಿಹಾರವಾಗಿ 1 ಮಿಲಿಯನ್ ಡಾಲರ್ ಭರಿಸುವಂತೆ ಅರ್ಜಿ ಗುಜರಾಯಿಸಿದ್ದಾಳೆ.

ಆದರೆ, ಇದನ್ನು ಅಲ್ಲಗಳೆದಿರುವ ಕಂಪನಿಯು, ಈ ಮಹಿಳೆ ಮಂಚ ಖರೀದಿಸಿದಾಗ ಜೋಡಣೆ ಸಮರ್ಪಕವಾಗಿಯೇ ಇದ್ದು, ಯಾವುದೇ ದೋಷ ಇರಲಿಲ್ಲ. ಆರೋಪದಲ್ಲಿ ಹುರುಳಿಲ್ಲ ಎಂದು ತಳ್ಳಿಹಾಕಿದೆ. ಮೊದಲ ಪತಿಗೆ ವಿಚ್ಛೇದನ ಕೊಟ್ಟು ಪ್ರತ್ಯೇಕವಾಗಿ ಬಸ್ಬಿ ಜೀವನ ಸಾಗಿಸುತ್ತಿದ್ದರು. ಈ ನಡುವೆ ಅವಾಂತರವಾಗಿದ್ದು, ಈಗ ತನ್ನ ಜೀವನೋಪಾಯಕ್ಕಾಗಿ ಹಣ ಬೇಕೆಂದು ಕಾನೂನು ಹೋರಾಟದಲ್ಲಿ ತೊಡಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...