alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮನನ್ನು ದ್ವೇಷಿಸುವ ಈಕೆ ಮಾಡಿದ್ದೇನು ಗೊತ್ತಾ..?

star1-02-1470141493

30 ವರ್ಷದ ಒಬ್ಬ ಮಹಿಳೆ ಸುಮಾರು 45 ಲಕ್ಷ ರೂ. ಖರ್ಚು ಮಾಡಿ ಬರೋಬ್ಬರಿ 15 ಸರ್ಜರಿ ಮಾಡಿಸಿಕೊಂಡಿದ್ದಾಳೆ. ಹೀಗೆ ಇವಳು ಸರ್ಜರಿ ಮಾಡಿಸಿಕೊಂಡಿದ್ದು, ಯಾವುದೋ ಸೌಂದರ್ಯ ಸ್ಪರ್ಧೆಗಾಗಿ ಅಲ್ಲ. ಬದಲಾಗಿ ಅಮ್ಮನ ಮೇಲಿನ ಸಿಟ್ಟಿಗೆ!!

ತಾಯಿ ಎಂದರೆ ದೇವರು ಎನ್ನುತ್ತಾರೆ. ಆದರೆ ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್ ನಿವಾಸಿ ಸ್ಟಾರ್ ಎನ್ನುವವಳಿಗೆ ಅಮ್ಮನ ಮೇಲೆ ಎಲ್ಲಿಲ್ಲದ ದ್ವೇಷ, ಸಿಟ್ಟು. ಅಮ್ಮನನ್ನು ಇಷ್ಟು ದ್ವೇಷಿಸುವ ಇವಳು,  ತನ್ನ ಮುಖ ಅಮ್ಮನನ್ನು ಹೋಲುತ್ತದೆ ಎಂಬ ಒಂದೇ ಒಂದು ಕಾರಣಕ್ಕೆ ಚಹರೆಯನ್ನೇ ಬದಲಾಯಿಸಿಕೊಂಡಿದ್ದಾಳೆ.

ಸ್ಟಾರ್ ಳ ಮೊದಲ ಹೆಸರು ಸ್ಟೇಸಿ. ಇವಳಿಗೆ 17 ವರ್ಷವಾದಾಗ ಇವಳ ಅಮ್ಮ ಯಾವುದೋ ಕಾರಣಕ್ಕೆ ಮನೆಯಿಂದ ಹೊರ ಹಾಕಿ ಹಾಸ್ಟೆಲ್ ನಲ್ಲಿ ಇಟ್ಟಳಂತೆ. ಅಂದಿನಿಂದ ಇವಳಿಗೆ ಅಮ್ಮನ ಮೇಲೆ ದ್ವೇಷ.

“ಕನ್ನಡಿಯಲ್ಲಿ ನನ್ನ ಮುಖ ನೋಡಿಕೊಂಡಾಗೆಲ್ಲ ನನಗೆ ನನ್ನ ಹಳೆಯ ಜೀವನ ನೆನಪಾಗುತ್ತಿತ್ತು. ನನ್ನ ಮುಖ ಅಮ್ಮನ ಮುಖವನ್ನು ಹೋಲುತ್ತಿತ್ತು. ಇದರಿಂದಲೇ ನಾನು ಮತ್ತೆ ಮತ್ತೆ ಸರ್ಜರಿಗೆ ಒಳಗಾದೆ. ಮೂಗಿನ ಶಸ್ತ್ರ ಚಿಕಿತ್ಸೆಯಿಂದ ನಾನು ಉಸಿರಾಟದ ತೊಂದರೆ ಅನುಭವಿಸುತ್ತಿದ್ದೇನೆ. ಆದರೂ ನನಗೆ ಚಿಂತೆಯಿಲ್ಲ. ನನ್ನ ಮುಖ ಈಗ ಸಂಪೂರ್ಣವಾಗಿ ಬದಲಾಗಿದೆ. ಇದರಿಂದ ನಾನು ನೆಮ್ಮದಿಯಾಗಿದ್ದೇನೆ” ಎನ್ನುತ್ತಾಳೆ ಸ್ಟೇಸಿ ಅಲಿಯಾಸ್ ಸ್ಟಾರ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...