alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್ ಪಂಪ್ ಸಮೇತ ಕಾರು ಚಲಾಯಿಸಿದ್ಲು ಮಹಿಳೆ

hijack

ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ಮಹಿಳೆಯೊಬ್ಳು ಅಪಹರಣಕಾರನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಪೆಟ್ರೋಲ್ ಪಂಪ್ ಅನ್ನೇ ಎಳೆದೊಯ್ದಿದ್ದಾಳೆ. ಬಂಕ್ ನಲ್ಲಿದ್ದ ಸಿಸಿ ಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಬೆಳಗಿನ ಜಾವ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಮಹಿಳೆ ಬಂಕ್ ಗೆ ಬಂದಿದ್ಲು.

ಬಂಕ್ ಸಿಬ್ಬಂದಿ ಪೆಟ್ರೋಲ್ ತುಂಬಿಸುತ್ತಿದ್ದ. ಅದೇ ಸಮಯಕ್ಕೆ ಅಲ್ಲಿ ಪ್ರತ್ಯಕ್ಷನಾದ ಅಪರಿಚಿತನೊಬ್ಬ ಕಾರಿನ ಬಳಿ ಬಂದು ಮಹಿಳೆಯನ್ನು ಮಾತನಾಡಿಸತೊಡಗಿದ. ಹೆದರಿದ ಮಹಿಳೆ ಕಾರು ಸ್ಟ್ರಾರ್ಟ್ ಮಾಡಿಕೊಂಡು ಅಲ್ಲಿಂದ ಹೊರಟೇ ಬಿಟ್ಟಿದ್ದಾಳೆ.

ಪೆಟ್ರೋಲ್ ತುಂಬಿಸ್ತಾ ಇದ್ದಿದ್ರಿಂದ ಪಂಪ್ ಅನ್ನು ಕೂಡ ಜೊತೆಗೆ ಎಳೆದೊಯ್ದಿದ್ದಾಳೆ. ಸುಮಾರು 100 ಮೀಟರ್ ದೂರ ಹೋಗಿದ್ದ ಮಹಿಳೆ ಮತ್ತೆ ವಾಪಸ್ ಬಂದು ಪಂಪ್ ಕೊಟ್ಟು ಹೋಗಿದ್ದಾಳೆ. ಈ ಹಿಂದೆಯೂ ಒಮ್ಮೆ ಅವಳನ್ನು ಹೈಜಾಕ್ ಮಾಡುವ ಯತ್ನ ನಡೆದಿತ್ತಂತೆ. ಹಾಗಾಗಿ ತಕ್ಷಣ ಹೊರಟಿದ್ದಾಗಿ ಹೇಳಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...