alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ದಾಟಲು ಕಂಬಿ ಏರಿದ ಮಹಿಳೆಗೆ ಆಗಿದ್ದೇನು?

ಶಾರ್ಟ್ ಕಟ್ ಅನ್ನೋದು ಯಾವಾಗ್ಲೂ ಅಪಾಯಕಾರಿಯೇ. ಚೀನಾದ ಝೆಜಾಂಗ್ ನಲ್ಲಿ ಮಹಿಳೆಯೊಬ್ಬಳಿಗೆ ಈ ಕಹಿ ಅನುಭವವಾಗಿದೆ. ಸುತ್ಹಾಕಿಕೊಂಡು ಬರೋ ಬದಲು ರಪ್ಪನೆ ಬ್ಯಾರಿಯರ್ ಏರಿ ರಸ್ತೆ ದಾಟೋಣ ಅಂತಾ ಮಹಿಳೆ ಪ್ಲಾನ್ ಮಾಡಿದ್ಲು. ಈ ಸರ್ಕಸ್ ಮಾಡಲು ಹೋಗಿ ಅವಳ ತಲೆ ಕಂಬಿಗಳ ಮಧ್ಯೆ ಸಿಕ್ಕಿಹಾಕಿಕೊಂಡು ಬಿಟ್ಟಿದೆ.

ಅತ್ತ ದಾಟಲೂ ಆಗದೆ, ಕತ್ತು ಹೊರತೆಗೆಯಲಾಗದೆ ಸ್ವಲ್ಪ ಹೊತ್ತು ಮಹಿಳೆ ಒದ್ದಾಡಿದ್ಲು. ರಸ್ತೆಯಲ್ಲಿ ಓಡಾಡ್ತಿದ್ದ ಸಾರ್ವಜನಿಕರು ಕೂಡ ಮಹಿಳೆಗೆ ಸಹಾಯ ಮಾಡಲು ಮುಂದಾದ್ರು. ಜಪ್ಪಯ್ಯ ಅಂದ್ರೂ ತಲೆ ಮಾತ್ರ ಕಂಬಿಗಳ ನಡುವಿನಿಂದ ಈಚೆ ಬರಲಿಲ್ಲ. ಕೊನೆಗೆ ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಲಾಯ್ತು.

ಹೈಡ್ರಾಲಿಕ್ ಟೂಲ್ ನೊಂದಿಗೆ ಬಂದ ಸಿಬ್ಬಂದಿ ಕಂಬಿಗಳನ್ನು ಕತ್ತರಿಸಿ ಮಹಿಳೆಯನ್ನು ಬಚಾವ್ ಮಾಡಿದ್ದಾರೆ. ಶಾರ್ಟ್ ಕಟ್ ಹುಡುಕಿ ಹೊರಟ ಮಹಿಳೆ ಪಜೀತಿ ಅನುಭವಿಸಿದ್ದಾಳೆ. ಆದದ್ದಾಗ್ಲಿ ಜೀವ ಉಳಿಯಿತಲ್ಲ ಅಂದ್ಕೊಂಡು ಕೊನೆಗೆ ನಿಟ್ಟುಸಿರು ಬಿಟ್ಟಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...