alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಕನ್ ಜೊತೆಗೆ ಡ್ರಿಂಕ್ಸ್ ನೀಡದ್ದಕ್ಕೆ ರೊಚ್ಚಿಗೆದ್ಲು ಯುವತಿ

ರೆಸ್ಟೋರೆಂಟ್ ಒಂದಕ್ಕೆ ಊಟಕ್ಕೆ ತೆರಳಿದ್ದ ಯುವತಿ ಅಲ್ಲಿ ತನಗೆ ಚಿಕನ್ ಜೊತೆಗೆ ಉಚಿತ ಡ್ರಿಂಕ್ಸ್ ನೀಡಲಿಲ್ಲವೆಂಬ ಕಾರಣಕ್ಕೆ ರೊಚ್ಚಿಗೆದ್ದಿದ್ದಾಳೆ. ಚೇರ್ ನಿಂದ ರೆಸ್ಟೋರೆಂಟ್ ನ ಗಾಜು ಒಡೆದು ಸ್ಥಳದಿಂದ ಕಾಲ್ಕಿತ್ತಿದ್ದಾಳೆ.

ಇಂತದೊಂದು ವಿಲಕ್ಷಣ ಘಟನೆ ನ್ಯೂಯಾರ್ಕ್ ನ ಸ್ಟೇಟನ್ ಐಲ್ಯಾಂಡ್ ನಲ್ಲಿ ನಡೆದಿದೆ. ಅಲ್ಲಿನ ಪೋಪ್ಪಿಸ್ ಚಿಕನ್ ಶಾಪ್ ಗೆ ಬಂದ ಯುವತಿ 4 ಡಾಲರ್ ನ ಚಿಕನ್ ತಿನಿಸೊಂದನ್ನು ಆರ್ಡರ್ ಮಾಡಿದ್ದಾಳೆ.

ಇದರಲ್ಲಿ ಡ್ರಿಂಕ್ಸ್ ಕೊಡುಗೆಯೂ ಇದೆ ಎಂದು ಆಕೆ ಭಾವಿಸಿದ್ದು, ಆದರೆ ವೇಯ್ಟರ್ ಚಿಕನ್ ತಿನಿಸನ್ನು ಮಾತ್ರ ತಂದಿಟ್ಟಾಗ ಜಗಳ ತೆಗೆದಿದ್ದಾಳೆ. ಬಳಿಕ ಆಕೆಯನ್ನು ಸಮಾಧಾನಪಡಿಸಲಾಗಿದ್ದು, ತಿನಿಸನ್ನು ಖಾಲಿ ಮಾಡಿದ ಯುವತಿ ಬಳಿಕ ಚೇರ್ ನಿಂದ ರೆಸ್ಟೋರೆಂಟ್ ನ ಗಾಜು ಒಡೆದು ತನ್ನ ಕಾರಿನಲ್ಲಿ ಪರಾರಿಯಾಗಿದ್ದಾಳೆ.

ಈ ದೃಶ್ಯಾವಳಿ ರೆಸ್ಟೋರೆಂಟ್ ನ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ಬಿಡುಗಡೆ ಮಾಡಿರುವ ನ್ಯೂಯಾರ್ಕ್ ನಗರ ಪೊಲೀಸರು, ಪರಾರಿಯಾಗಿರುವ ಯುವತಿಯ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...