alex Certify
ಕನ್ನಡ ದುನಿಯಾ       Mobile App
       

Kannada Duniya

”ಮಾತನಾಡಲೂ ವೇಶ್ಯೆಯರ ಬಳಿ ಹೋಗ್ತಾರಂತೆ ಪುರುಷರು”

10 ಸಾವಿರಕ್ಕೂ ಹೆಚ್ಚು ಪುರುಷರ ಜೊತೆ ವ್ಯವಹಾರ ನಡೆಸಿದ ಸೆಕ್ಸ್ ವರ್ಕರ್ ಒಬ್ಬಳು ಈಗ ಚರ್ಚೆಯಲ್ಲಿದ್ದಾಳೆ. ಆಸ್ಟ್ರೇಲಿಯಾದ ಗ್ವಿನೆತ್ ಮಾಂಟೆನೆಗ್ರೂ ತನ್ನ ಅನುಭವವನ್ನು ಪುಸ್ತಕದ ಮೂಲಕ ಹಂಚಿಕೊಂಡಿದ್ದಾಳೆ. 39 ವರ್ಷದ ಗ್ವಿನೆತ್ 12 ವರ್ಷಗಳನ್ನು ಸೆಕ್ಸ್ ವರ್ಕರ್ಸ್ ಉದ್ಯಮದಲ್ಲಿ ಕಳೆದಿದ್ದಾಳೆ. ಆಕೆ ಅನುಭವದ ಪುಸ್ತಕ ಪ್ರಚಾರದ ರೀತಿಯಲ್ಲಿದೆ ಎಂಬ ಮಾತುಗಳೂ ಕೇಳಿ ಬಂದಿವೆ.

ದಿ ಸೀಕ್ರೆಟ್ ಟ್ಯಾಬೂ ಹೆಸರಿನಲ್ಲಿ ಗ್ವಿನೆತ್ ಪುಸ್ತಕ ಬರೆದಿದ್ದಾಳೆ. ಪುಸ್ತಕದಲ್ಲಿ ಸೆಕ್ಸ್ ವರ್ಕರ್ಸ್ ಜೀವನ ಹೇಗಿರುತ್ತೆ ಎಂಬುದರಿಂದ ಹಿಡಿದು ಎಂತೆಂತ ಪುರುಷರು ಅಲ್ಲಿಗೆ ಬರ್ತಾರೆಂಬ ವಿವರನ್ನು ಗ್ವಿನೆತ್ ಹೇಳಿದ್ದಾಳೆ. ಗ್ವಿನೆತ್ ಪ್ರಕಾರ ವೇಶ್ಯಾವಾಟಿಕೆಗೆ ಬರುವ ಪುರುಷರೆಲ್ಲರೂ ಶಾರೀರಿಕ ಸಂಬಂಧ ಬೆಳೆಸಲು ಬರುವುದಿಲ್ಲವಂತೆ. ಕೆಲ ಪುರುಷರು ಒಂದಿಷ್ಟು ಮಾತನಾಡಿ ಮನಸ್ಸು ಹಗುರ ಮಾಡಿಕೊಳ್ಳಲು ಬರ್ತಾರಂತೆ. ಹೆಂಡತಿ ಚಿಕ್ಕವಳಿರುವ ಕಾರಣ ಎಲ್ಲ ವಿಷ್ಯವನ್ನು ಆಕೆ ಮುಂದೆ ಹೇಳಲು ಸಾಧ್ಯವಿಲ್ಲ. ಹಾಗಾಗಿ ಸೆಕ್ಸ್ ವರ್ಕರ್ಸ್ ಮನೆ ಬಾಗಿಲಿಗೆ ಬರ್ತಾರೆಂದು ಗ್ವಿನೆತ್ ಹೇಳಿದ್ದಾಳೆ.

ಸೆಕ್ಸ್ ವರ್ಕರ್ಸ್ ಆಗಲು ವಯಸ್ಸಿನ ಮಿತಿ ಇಲ್ಲ ಎನ್ನುತ್ತಾಳೆ ಗ್ವಿನೆತ್. 30ರಿಂದ 80ರವರೆಗಿನ ಮಹಿಳೆಯರೂ ಈ ದಾರಿ ತುಳಿಯಬಹುದು. ಗ್ಲಾಮರಸ್ಗಿಂತ ವಿಶ್ವಾಸ ಮುಖ್ಯ ಎಂದು ಪುಸ್ತಕದಲ್ಲಿ ಹೇಳಿದ್ದಾಳೆ. 18 ವರ್ಷದವಳಿದ್ದಾಗ ಗ್ವಿನೆತ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತಂತೆ. 21ನೇ ವರ್ಷಕ್ಕೆ ಗ್ವಿನೆತ್ ಈ ಸೆಕ್ಸ್ ಉದ್ಯಮಕ್ಕೆ ಕಾಲಿಟ್ಟಳಂತೆ. ಸೆಕ್ಸ್ ಗೆ ಬದಲಾಗಿ ಕೈಗೆ ಹಣ ಬರ್ತಿದ್ದಂತೆ ಆಕೆ ವ್ಯಕ್ತಿತ್ವವೇ ಬದಲಾಯ್ತಂತೆ.

ರಾಜಕಾರಣಿಗಳು, ಗಣ್ಯವ್ಯಕ್ತಿಗಳ ಸಂಪರ್ಕ ಹೊಂದಿದ್ದ ಗ್ವಿನೆತ್ 29ನೇ ವಯಸ್ಸಿನಲ್ಲಿ ಪೈಲೆಟ್ ಆಗುವ ಕನಸು ಕಂಡಿದ್ದಳಂತೆ. ಇದಕ್ಕಾಗಿ ಅರ್ಜಿ ಕೂಡ ಸಲ್ಲಿಸಿದ್ದಳಂತೆ. ಆದ್ರೆ ಕಿಡ್ನಿ ಸಮಸ್ಯೆಯಿಂದಾಗಿ ಇದೇ ಕೆಲಸ ಮುಂದುವರೆಸಬೇಕಾಯ್ತಂತೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...