alex Certify
ಕನ್ನಡ ದುನಿಯಾ       Mobile App
       

Kannada Duniya

ಮೀಸೆ ತೆಗೆಯಲು ಹೋಗಿ ಯಡವಟ್ಟು ಮಾಡಿಕೊಂಡ ಯುವತಿ

ಪೂರ್ವಾಪರ ವಿಚಾರಣೆ ಮಾಡದೆ ಬಳಸುವ ಸೌಂದರ್ಯವರ್ಧಕಗಳು ಕೆಲವೊಮ್ಮೆ ಆಪತ್ತಿಗೆ ಕಾರಣವಾಗುತ್ತದೆ. ಇದಕ್ಕೆ ವೇಲ್ಸ್ ಮಹಿಳೆ ಉತ್ತಮ ನಿದರ್ಶನ. ಕೆಂಟಲ್ ಹೆಸರಿನ 26 ವರ್ಷದ ಮಹಿಳೆಗೆ ಮೀಸೆ ಬರ್ತಿತ್ತಂತೆ. ಪ್ರತಿ ಬಾರಿ ವ್ಯಾಕ್ಸ್ ಮಾಡಿ ಮೀಸೆ ತೆಗೆಯುತ್ತಿದ್ದಳಂತೆ. ಆದ್ರೆ ಈ ಬಾರಿ ಹೇರ್ ರಿಮೂವರ್ ಕ್ರೀಂ ಬಳಸಲು ಮುಂದಾಗಿದ್ದಾಳೆ. ಅದೇ ಯಡವಟ್ಟಾಗಿದೆ.

ಸಮಯ ಉಳಿಯುತ್ತೆ ಎನ್ನುವ ಕಾರಣಕ್ಕೆ ಮಹಿಳೆ ಹೇರ್ ರಿಮೂವರ್ ಕ್ರೀಂ ಬಳಸಿದ್ದಾಳೆ. ಆದ್ರೆ ಹೇರ್ ರಿಮೂವರ್ ಕ್ರೀಂ ಆಕೆ ಮುಖವನ್ನು ಸುಟ್ಟಿದೆ. ಮೀಸೆ ಬರುವ ಜಾಗದಲ್ಲಿ ದೊಡ್ಡ ಕಲೆಯಾಗಿದೆ. ಹೇರ್ ರಿಮೂವರ್ ಕ್ರೀಂ ಬಳಸುತ್ತಿದ್ದಂತೆ ಉರಿ ಶುರುವಾಗಿದೆಯಂತೆ. ತಕ್ಷಣ ತೊಳೆದಿದ್ದಾಳಂತೆ. ಆದ್ರೂ ತುಟಿ ಮೇಲ್ಭಾಗದಲ್ಲಿ ಕೆಂಪು ಕಲೆಯಾಗಿತ್ತಂತೆ.

ಸ್ನೇಹಿತರು ಹಾಗೂ ಸಂಬಂಧಿಕರ ತಮಾಷೆಗೆ ಗುರಿಯಾದ ಕೆಂಟಲ್ ಮೂಗಿನ ಕೆಳಭಾಗ ಮೂರು ದಿನಕ್ಕೆ ಸಹಜ ಸ್ಥಿತಿಗೆ ಮರಳಿದೆ ಇನ್ಮುಂದೆ ಯಾವುದೇ ಕಾರಣಕ್ಕೂ ಹೇರ್ ರಿಮೂವರ್ ಬಳಸುವುದಿಲ್ಲವೆಂದು ಕೆಂಟಲ್ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...