alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ ಲೈನ್ ನಲ್ಲಿ ಹೋಟೆಲ್ ಈಜುಕೊಳ ನೋಡಿ ಮೋಸ ಹೋದ ಯುವತಿ ಮಾಡಿದ್ದೇನು…?

ಜೀವನದಲ್ಲಿ ಒಮ್ಮೆಯಾದ್ರೂ  ದೇಶ ಸುತ್ತಬೇಕು ಅನ್ನೋ ಆಸೆ ಎಲ್ಲರಿಗೂ ಇರತ್ತೆ. ಹೀಗಾಗಿ ಸುಂದರವಾದ ಜಾಗಕ್ಕೆ ಪ್ರಯಾಣ ಮಾಡಲು ಬಯಸುತ್ತೇವೆ. ಇದನ್ನೇ ಕೆಲ ಹೋಟೆಲ್ ಗಳು, ಬುಕಿಂಗ್ ವೆಬ್ ಸೈಟ್ ಗಳು ಬಂಡವಾಳ ಮಾಡಿಕೊಳ್ತಿವೆ. ಆನ್ ಲೈನ್ ಗಳಲ್ಲಿ ಐಶಾರಾಮಿ ಹೋಟೆಲ್, ಈಜುಕೊಳ, ವಿಧ ವಿಧವಾದ ಆಹಾರಗಳನ್ನ ತೋರಿಸಿ ಜನರನ್ನ ಬೇಸ್ತು ಬೀಳಿಸುತ್ತಿವೆ.

ಇಂಗ್ಲೆಂಡಿನ ಮಾಂಚೆಸ್ಟರ್ ನ ಜೆನ್ನಿ ಕೆರ್ಷಾ ಎಂಬಾಕೆ ಹೋಟೆಲ್ ಒಂದರ ಈಜುಕೊಳ, ಅಲ್ಲಿನ ಐಶಾರಾಮಿ ರೂಮ್ ಗಳನ್ನು ಆನ್ ಲೈನ್ ನಲ್ಲಿ ನೋಡಿ ಬುಕ್ ಮಾಡಿದ್ಲು. ಆದ್ರೆ ಆಕೆ ಆ ಹೋಟೆಲ್ ಬಂದಾಗ ತಿಳಿದಿತ್ತು ಅಲ್ಲಿನ ವಾಸ್ತವ. ಆನ್ ಲೈನ್ ನ ಫೋಟೋಗ್ರಫಿ ಟ್ರಿಕ್ ಗೆ ಆಕೆ ಮೋಸ ಹೋಗಿದ್ಲು.

ಹೋಟೆಲ್ ನ ಈಜುಕೊಳದ ಬಗ್ಗೆ ಇದ್ದ ಅವಳ ನಿರೀಕ್ಷೆ ಮತ್ತು ಅಲ್ಲಿನ ವಾಸ್ತವದ ಚಿತ್ರಣವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿದ್ದಾಳೆ. booking.com ನಲ್ಲಿದ್ದ ಸ್ವಿಮ್ಮಿಂಗ್ ಪೂಲ್ ಮತ್ತು ಆ ಹೋಟೆಲ್ ನಲ್ಲಿರುವ ಸ್ವಿಮ್ಮಿಂಗ್ ಪೂಲ್ ನ ಪೋಟೋವನ್ನು ಹಾಕಿ, ತಾನು ಮೋಸ ಹೋದ ಬಗ್ಗೆ ತಿಳಿಸಿದ್ದಾಳೆ. ಇದು ಟ್ವಿಟರ್ ಬಳಕೆದಾರರನ್ನು ನಗೆ ಗಡಲಲ್ಲಿ ತೇಲಿಸಿದೆ. ಆಕೆ ಟ್ವಿಟರ್ ನಲ್ಲಿ ಹಾಕಿರುವ ಈ ಫೋಟೋಗೆ 78 ಸಾವಿರ ರೀಟ್ವೀಟ್ ಗಳು ಮತ್ತು 170,000 ಲೈಕ್ಸ್ ಗಳು ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...