alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಯ ಪ್ರಾಣ ಉಳಿಸಲು ಆತನ ಗಂಟಲು ಕತ್ತರಿಸಿದ್ಲು ಪ್ರಿಯತಮೆ…!

ನ್ಯೂಜಿಲೆಂಡ್ ನ ಸಾರಾ ಗ್ಲಾಸ್ ಮತ್ತವಳ ಬಾಯ್ ಫ್ರೆಂಡ್ ಐಸಾಕ್ ಬೆಸ್ಟರ್ ಡಿನ್ನರ್ ಗೆ ಅಂತಾ ಹೋಟೆಲ್ ಗೆ ತೆರಳಿದ್ರು. ಟೇಸ್ಟಿ ಬಾರ್ಬಿಕ್ಯೂ ಆರ್ಡರ್ ಮಾಡಿದ್ದಾರೆ. ಐಸಾಕ್ ತನ್ನ ಸಾಮರ್ಥ್ಯಕ್ಕಿಂತ್ಲೂ ಹೆಚ್ಚು ಭಾಗವನ್ನು ಬಾಯಿಯಲ್ಲಿ ಹಾಕಿಕೊಂಡು ಬಿಟ್ಟಿದ್ದ.

ಅದನ್ನು ಜಗಿಯಲು ಸಾಧ್ಯವಾಗದೇ ಒದ್ದಾಡಿದ್ದಾನೆ. ಮಾಂಸದ ತುಂಡು ಅವನ ಗಂಟಲಲ್ಲಿ ಸಿಕ್ಕಿಹಾಕಿಕೊಂಡಿದೆ. ಉಸಿರಾಡಲಾಗದೇ ಒದ್ದಾಡುತ್ತಿದ್ದ ಐಸಾಕ್ ಗೆ ಸಹಾಯ ಮಾಡಲು ಸುತ್ತಮುತ್ತಲಿನ ಟೇಬಲ್ ನಲ್ಲಿದ್ದವರೆಲ್ಲಾ ಬಂದ್ರು.

ಆತನ ಹೊಟ್ಟೆ ಮೇಲೆ ಒತ್ತಡ ಹಾಕಿ ಗಂಟಲಲ್ಲಿದ್ದ ಮಾಂಸದ ತುಂಡನ್ನು ಹೊರಹಾಕಲು ಪ್ರಯತ್ನಿಸಿದ್ರು. ಆದ್ರೆ ಸಾಧ್ಯವಾಗಲಿಲ್ಲ. ಇನ್ನು ಹೆಚ್ಚು ಸಮಯವಿಲ್ಲ ಅನ್ನೋದನ್ನು ಅರಿತ ಅವನ ಗೆಳತಿ, ಗಟ್ಟಿ ನಿರ್ಧಾರಕ್ಕೆ ಬಂದ್ಲು.

ಚಾಕು ತೆಗೆದುಕೊಂಡು ಆತನ ಗಂಟಲನ್ನು ಸಣ್ಣಗೆ ಕತ್ತರಿಸಿದ್ದಾಳೆ. ಅಲ್ಲಿಂದ ಉಸಿರಾಡಲು ಐಸಾಕ್ ಗೆ ಸಹಾಯವಾಯ್ತು. ಬಳಿಕ ಸ್ಥಳಕ್ಕೆ ಬಂದ ವೈದ್ಯಕೀಯ ಸಿಬ್ಬಂದಿ, ಐಸಾಕ್ ಗೆ ಆಕ್ಸಿಜನ್ ಅಳವಡಿಸಿ, ಆಸ್ಪತ್ರೆಗೆ ಕರೆದೊಯ್ದರು.

ಸಾರಾ ದೃಢ ನಿರ್ಧಾರ ಮಾಡಿ ಐಸಾಕ್ ನ ಗಂಟಲು ಕತ್ತರಿಸಿದೇ ಇದ್ರೆ ಆತ ಬದುಕುತ್ತಲೇ ಇರಲಿಲ್ಲ. ಆಕೆ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವ ಸೂಲಗಿತ್ತಿಯಾಗಿರೋದ್ರಿಂದ ಧೈರ್ಯದಿಂದ ಈ ಕೆಲಸ ಮಾಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...