alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಪ್ರಿಯತಮನ ಮೋಸ ಪತ್ತೆ ಮಾಡಿದ ಯುವತಿ ಪೋಸ್ಟ್

ಪ್ರೇಯಸಿಗೆ ವಂಚಿಸ್ತಾ ಇದ್ದ ಯುವಕನೊಬ್ಬನ ಅಸಲಿಯತ್ತು ಇಂಟರ್ನೆಟ್ ಮೂಲಕ ಬಯಲಾಗಿದೆ. ಇನ್ ಸ್ಟಾಗ್ರಾಮ್ ಮೂಲಕ ಗೆಳೆಯನ ಮೋಸದಾಟವನ್ನು ಯುವತಿ ಪತ್ತೆ ಮಾಡಿದ್ದಾಳೆ. ಅಯನಾ ಎಂಬ ಯುವತಿ 3 ವರ್ಷಗಳಿಂದ ಅವನನ್ನು ಪ್ರೀತಿಸ್ತಾ ಇದ್ಲು. ಇಬ್ಬರೂ ಒಂದೇ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ರು.

ತನ್ನ ಸಹೋದ್ಯೋಗಿಯ ಇನ್ ಸ್ಟಾಗ್ರಾಮ್ ಅಕೌಂಟ್ ನೋಡಿದ ಅಯನಾಗೆ ಶಾಕ್ ಕಾದಿತ್ತು. ಯಾಕಂದ್ರೆ ಅಲ್ಲಿ ಅವಳ ಜೊತೆಗಿದ್ದವ ಇವಳ ಬಾಯ್ ಫ್ರೆಂಡ್. ಈ ವಿಚಾರ ಗೊತ್ತಾದ್ಮೇಲೂ ಅಹನಾ ಸಹನೆ ಕಳೆದುಕೊಳ್ಳಲಿಲ್ಲ. ತನ್ನದೇ ಗೆಳೆಯನ ಜೊತೆಗೆ ಚಕ್ಕಂದವಾಡ್ತಿದ್ದ ಸಹೋದ್ಯೋಗಿಯನ್ನು ಮನೆಗೆ ಆಹ್ವಾನಿಸಿದ್ಲು.

ಆಕೆ ಬರ್ತಿರೋ ವಿಚಾರ ಯುವಕನಿಗೆ ಗೊತ್ತಿರಲಿಲ್ಲ. ತನ್ನ ಮೋಸದಾಟ ಪ್ರಿಯತಮೆಗೆ ಗೊತ್ತಾಗಿದೆ ಅನ್ನೋ ಅರಿವೂ ಇರಲಿಲ್ಲ. ಎರಡನೇ ಗೆಳತಿ ಮನೆಗೆ ಬಂದಾಗ ಯುವಕ ಸ್ನಾನಕ್ಕೆ ಹೋಗಿದ್ದ. ಈ ವೇಳೆ ಅಯನಾ ಸಹೋದ್ಯೋಗಿ ಜೊತೆಗೆ ಹರಟಿದ್ದಾಳೆ. ಸ್ನಾನ ಮಾಡಿ ಬಂದ ಯುವಕನಿಗೆ ಎರಡನೇ ಗೆಳತಿ ಎದುರು ಬದುರಾದ್ಲು.

ಇಬ್ಬರಿಗೂ ಒಂದು ರೀತಿಯ ಆಘಾತ, ಇಂಗು ತಿಂದ ಮಂಗನಂತಾಗಿದ್ದ ಯುವಕ ಏನು ಮಾತನಾಡ್ಬೇಕು ಅನ್ನೋದೇ ತೋಚದೆ ನಿಂತಿದ್ದ. ಇಷ್ಟೆಲ್ಲಾ ಆದ್ಮೇಲೆ ಆ ಯುವತಿಯ ಜೊತೆಗೆ ಗೆಳೆತನ ಮುಂದುವರಿಸುವ ಇಚ್ಛೆ ಅಯನಾಗಿಲ್ಲ. ಬಾಯ್ ಫ್ರೆಂಡ್ ಅನ್ನು ಕೂಡ ಮನೆಯಿಂದ ಆಚೆಗಟ್ಟಿಬಿಡು ಅಂತಾ ಎಲ್ಲರೂ ಟ್ವಿಟ್ಟರ್ ನಲ್ಲಿ ಸಲಹೆ ಕೊಟ್ಟಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...