alex Certify
ಕನ್ನಡ ದುನಿಯಾ       Mobile App
       

Kannada Duniya

18 ತಿಂಗಳ ಮಗುವಿನ ಮೇಲೆ ಕಾರು ಹರಿಸಿದ ಮಹಿಳೆ

baby

ಶಾರ್ಜಾದಲ್ಲಿ ಮಹಿಳೆಯೊಬ್ಳು 18 ತಿಂಗಳ ಪುಟ್ಟ ಕಂದಮ್ಮನ ಮೇಲೆ ಕಾರು ಹರಿಸಿದ್ದಾಳೆ. ಕಲ್ಬಾ ನಗರದಲ್ಲಿರುವ ರೆಸ್ಟೋರೆಂಟ್ ಒಂದರ ಎದುರು ಈ ದುರ್ಘಟನೆ ನಡೆದಿದೆ.

18 ತಿಂಗಳ ಪುಟಾಣಿ ಕಾರಿನ ಹಿಂಭಾಗದಲ್ಲಿ ನಿಂತಿತ್ತು. ಅದನ್ನು ಗಮನಿಸದ ಮಹಿಳೆ ಕಾರನ್ನು ರಿವರ್ಸ್ ತೆಗೆದುಕೊಂಡಿದ್ದಾಳೆ, ಆಗ ಕಾರಿನಡಿ ಸಿಲುಕಿದ ಮಗು ಅಪ್ಪಚ್ಚಿಯಾಗಿದೆ.

ತೀವ್ರ ಗಾಯಗೊಂಡಿದ್ದ ಮಗುವನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯ್ತು. ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಯ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.

ಈ ಅವಘಡಕ್ಕೆ ಕಾರಣಳಾದ ಮಹಿಳೆ ಮಾತ್ರ ಇನ್ನೂ ಪೊಲೀಸರಿಗೆ ಸಿಕ್ಕಿಬಿದ್ದಿಲ್ಲ. ಘಟನೆ ನಡೆದ ತಕ್ಷಣ ಆಕೆ ಕಾರಿನ ಸಮೇತ ಪರಾರಿಯಾಗಿದ್ದಾಳೆ. ಆರೋಪಿ ಮಹಿಳೆಗಾಗಿ ಶಾರ್ಜಾ ಪೊಲೀಸರು ತಲಾಶ್ ಮಾಡ್ತಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...