alex Certify
ಕನ್ನಡ ದುನಿಯಾ       Mobile App
       

Kannada Duniya

111ರ ಅಜ್ಜಿಯ ದೀರ್ಘಾಯುಷ್ಯದ ಗುಟ್ಟು ಕೇಳಿದ್ರೆ ದಂಗಾಗ್ತೀರಾ

ಗ್ರೇಸ್ ಜೋನ್ಸ್ ಬ್ರಿಟನ್ ನ ದೀರ್ಘಾಯುಷಿಗಳಲ್ಲಿ ಒಬ್ಬಳು. ಈ ಹಿರಿಯಜ್ಜಿಗೆ ಈಗ 111 ವರ್ಷ. ಗ್ರೇಸ್ ಳ ದೀರ್ಘಾಯುಷ್ಯದ ರಹಸ್ಯ ಕೇಳಿದ್ರೆ ನೀವೂ ಕೂಡ ಅಚ್ಚರಿಪಡೋದು ಗ್ಯಾರಂಟಿ. ಈ ವಯಸ್ಸಿನಲ್ಲೂ ಇಷ್ಟು ಚಟುವಟಿಕೆಯಿಂದ ಆರೋಗ್ಯವಾಗಿರಲು ಕಾರಣ ಏನ್ ಗೊತ್ತಾ? ವಿಸ್ಕಿ.

ಹೌದು, ಗ್ರೇಸ್ ಜೋನ್ಸ್ ಕಳೆದ 60 ವರ್ಷಗಳಿಂದ್ಲೂ ಪ್ರತಿನಿತ್ಯ ರಾತ್ರಿ ಒಂದು ಶಾಟ್ ವಿಸ್ಕಿ ಕುಡಿಯುತ್ತಾಳಂತೆ. ಈ ಅಭ್ಯಾಸವನ್ನು ಒಂದು ದಿನವೂ ಆಕೆ ತಪ್ಪಿಸಿಲ್ಲ.  ಜೊತೆಗೆ ಪಾಸಿಟಿವ್ ಥಿಂಕಿಂಗ್ ಕೂಡ ಅವಳನ್ನು ಆರೋಗ್ಯವಾಗಿರಿಸಲು ನೆರವಾಗಿದೆ. ಗ್ರೇಸ್ ಜೋನ್ಸ್ ಪುತ್ರಿಗೆ ಈಗ 80 ವರ್ಷ. ತಾಯಿಯ ಚಟುವಟಿಕೆಯ ಬದುಕಿನ ಬಗ್ಗೆ ಅವಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾಳೆ.

ಗ್ರೇಸ್ ಜೋನ್ಸ್ 1906ರಲ್ಲಿ ಲಿವರ್ ಪೂಲ್ ನಲ್ಲಿ ಜನಿಸಿದ್ಲು. ಅವಳ ಪತಿ 1986ರಲ್ಲಿ ತೀರಿಕೊಂಡಿದ್ದಾನೆ. ಈಕೆ ಬ್ರಿಟನ್ ನ ಅತಿ ಹಿರಿಯ ವ್ಯಕ್ತಿಗಳಲ್ಲಿ ಆರನೆಯವಳು. 113ರ ಹರೆಯದ ಬೆಸ್ಸಿ ಕ್ಯಾಮ್ ಅತಿ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...