alex Certify
ಕನ್ನಡ ದುನಿಯಾ       Mobile App
       

Kannada Duniya

ಶೇ.60 ರಷ್ಟು ಸುಟ್ಟವಳು 200 ಸರ್ಜರಿ ಬಳಿಕ ಹೇಗೆ ಕಾಣ್ತಿದ್ದಾಳೆ ಗೊತ್ತಾ?

ಆಸ್ಟ್ರೇಲಿಯಾದ ಮಹಿಳೆಯೊಬ್ಬಳು 200ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ. ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಈಕೆಯ ಬಯಕೆಯಾಗಿರಲಿಲ್ಲ. ಅನಿವಾರ್ಯವಾಗಿತ್ತು. ಮಹಿಳೆ ಮೇಲೆ ಅಕ್ರಮ ಸಂಬಂಧದ ಶಂಕೆ ವ್ಯಕ್ತಪಡಿಸಿದ್ದ ಪತಿ ಆಕೆಗೆ ಬೆಂಕಿಯಿಟ್ಟಿದ್ದ. ಶೇಕಡಾ 60ರಷ್ಟು ಸುಟ್ಟಿದ್ದ ಮಹಿಳೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮೊದಲಿಗಿಂತ ಸುಂದರವಾಗಿ ಕಾಣ್ತಿದ್ದಾಳೆ.

2012ರಲ್ಲಿ ಘಟನೆ ನಡೆದಿತ್ತು. ಡಾನಾ ಸೋಫಾ ಮೇಲೆ ಮಲಗಿದ್ದಳು. ಅಲ್ಲಿಗೆ ನಶೆಯಲ್ಲಿ ಬಂದ ಪತಿ ನಟಾಲಿಯಾ ಮಿಥೈಲ್ ಸ್ಪಿರಿಟ್ ಹಾಕಿ ಬೆಂಕಿ ಹಚ್ಚಿದ್ದ. ಡಾನಾ ಶೇಕಡಾ 60ರಷ್ಟು ಸುಟ್ಟು ಹೋಗಿದ್ದಳು. ಅದೃಷ್ಟವಶಾತ್ ಜೀವ ಉಳಿದಿತ್ತು. ಪ್ರಕರಣದಲ್ಲಿ ನಟಾಲಿಯಾಗೆ 17 ವರ್ಷ ಜೈಲು ಶಿಕ್ಷೆಯಾಗಿದೆ.

ಸುಮಾರು 2 ವರ್ಷಗಳ ಕಾಲ ಡಾನಾ ಮುಖ ಮುಚ್ಚಿಕೊಂಡು ತಿರುಗುತ್ತಿದ್ದಳಂತೆ. ಹಳೆ ಚರ್ಮ ಹೋಗಿ ಹೊಸ ಚರ್ಮ ಬರುವಾಗ ಅಸಹನೀಯ ನೋವಾಗ್ತಿತ್ತಂತೆ. ಮೂರು ವರ್ಷದಲ್ಲಿ 200ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಲಾಗಿದೆಯಂತೆ. ಒಮ್ಮೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡ್ತಿದ್ದ ಡಾನಾ ಪತಿಗೆ ಬುದ್ದಿ ಕಲಿಸಲು ಬದುಕಿರುವ ನಿರ್ಧಾರ ತೆಗೆದುಕೊಳ್ಳುತ್ತಿದ್ದಳಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...