alex Certify
ಕನ್ನಡ ದುನಿಯಾ       Mobile App
       

Kannada Duniya

9 ವರ್ಷಗಳ ಬಳಿಕ ಸಿಕ್ತು ಕಾಣೆಯಾಗಿದ್ದ ಉಂಗುರ

ಕಳೆದು ಹೋಗಿರೋ ವಸ್ತು ಮರಳಿ ಸಿಗಬೇಕು ಅಂದ್ರೆ ಅದೃಷ್ಟ ಮಾಡಿರಬೇಕು. ಅದ್ರಲ್ಲೂ ಟ್ರಾವೆಲಿಂಗ್ ಸಮಯದಲ್ಲಿ ಕಳೆದ ವಸ್ತು ಮತ್ತೆ ಸಿಗಬಹುದು ಅನ್ನೋ ನಿರೀಕ್ಷೆ ಇಟ್ಕೊಳ್ಳೋದು ಕೂಡ ಕಷ್ಟ. ಆದ್ರೆ ನ್ಯೂಜೆರ್ಸಿಯ ದಂಪತಿಗೆ 9 ವರ್ಷಗಳ ಹಿಂದೆ ಕಳೆದಿದ್ದ ನಿಶ್ಚಿತಾರ್ಥದ ಉಂಗುರ ಮರಳಿ ಸಿಕ್ಕಿದೆ.

ಜಸ್ಟಿನ್ ಹಾಗೂ ಮಾರ್ಗರೆಟ್ ಮುಸೆಲ್ 9 ವರ್ಷಗಳ ಹಿಂದೆ ರಜಾ ಕಳೆಯಲು ಇಟಲಿಗೆ ಬಂದಿದ್ರು. ಮಾರ್ಗರೆಟ್ ಸಂಬಂಧಿಕರು ಕೂಡ ಇಟಲಿಯಲ್ಲಿದ್ರು. ಒಂದು ದಿನ ಇಟಲಿಯ ಸುಂದರ ತಾಣಗಳನ್ನು ಯುವ ಜೋಡಿ ವೀಕ್ಷಿಸಿದ್ರು. ಮರುದಿನ ಬೆಳಗ್ಗೆ ಏಳುವಷ್ಟರಲ್ಲಿ ಮಾರ್ಗರೆಟ್ ಗೆ ಶಾಕ್ ಕಾದಿತ್ತು.

ಆಕೆಯ ಬೆರಳಲ್ಲಿದ್ದ ನಿಶ್ಚಿತಾರ್ಥದ ಉಂಗುರ ಎಲ್ಲೋ ಬಿದ್ದು ಹೋಗಿತ್ತು. ಎಷ್ಟು ಹುಡುಕಿದ್ರೂ ಸಿಗಲೇ ಇಲ್ಲ. ನಂತರ ಜಸ್ಟಿನ್, ಪತ್ನಿಗಾಗಿ ಅಂಥದ್ದೇ ಮತ್ತೊಂದು ಉಂಗುರ ಖರೀದಿಸಿ ತಂದಿದ್ದ. ಕಳೆದು ಹೋಗಿದ್ದ ಉಂಗುರದ ಆಸೆಯನ್ನೇ ಅವರು ಬಿಟ್ಟುಬಿಟ್ಟಿದ್ದರು.

ಇತ್ತೀಚೆಗಷ್ಟೆ ಜಸ್ಟಿನ್, ಮಾರ್ಗರೆಟ್ ದಂಪತಿ, ಅವರ ಇಬ್ಬರು ಮಕ್ಕಳು ಹಾಗೂ ಮಾರ್ಗರೆಟ್ ತಂದೆ ಇಟಲಿಗೆ ಬಂದಿದ್ರು. ರಾತ್ರಿ 11 ಗಂಟೆ ವೇಳೆಗೆ ಎಲ್ಲರೂ ಮನೆಯ ಹೊರಗೆ ಕುಳಿತು ಹರಟೆ ಹೊಡೆಯುತ್ತಿದ್ರು. ಆಗ ಗೋಡೆಯ ಬಿರುಕಿನಲ್ಲಿ ಏನೋ ಹೊಳೆದಂತೆ ಕಂಡಿತ್ತು.

ಕುತೂಹಲದಿಂದ ಜಸ್ಟಿನ್ ಸ್ಕ್ರೂ ಡ್ರೈವರ್ ತೆಗೆದುಕೊಂಡು ಅದರೊಳಕ್ಕೆ ಕೆದಕಿ ನೋಡಿದ್ದ. ಅಲ್ಲಿ 9 ವರ್ಷಗಳ ಹಿಂದೆ ಕಾಣೆಯಾಗಿದ್ದ ಉಂಗುರವಿತ್ತು. ಉಂಗುರ ಮರಳಿ ದೊರೆತಿದ್ರಿಂದ ಮಾರ್ಗರೆಟ್ ಸಂತಸಕ್ಕೆ ಪಾರವೇ ಇರಲಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...