alex Certify
ಕನ್ನಡ ದುನಿಯಾ       Mobile App
       

Kannada Duniya

ಪಂಚಾಯಿತಿ ತೀರ್ಪಿನಿಂದ ಅತ್ಯಾಚಾರಕ್ಕೊಳಗಾದ ಗರ್ಭಿಣಿ ಸಾವು

rape-pak

ಲಾಹೋರ್: ಅತ್ಯಾಚಾರ ಪ್ರಕರಣವೊಂದರಲ್ಲಿ, ಪಂಚಾಯಿತಿ ನೀಡಿದ ಅಮಾನವೀಯ ತೀರ್ಪಿಗೆ, ಗರ್ಭಿಣಿ ಬಲಿಯಾದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಪಂಜಾಬ್ ಪ್ರಾಂತ್ಯದ ಗ್ರಾಮವೊಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಕಾಮುಕನೊಬ್ಬ, ಅತ್ಯಾಚಾರ ಎಸಗಿದ್ದಾನೆ. ಬಾಲಕಿಯ ಪೋಷಕರು, ಗ್ರಾಮದ ಹಿರಿಯರಿಗೆ ದೂರು ನೀಡಿದ್ದು, ಪಂಚಾಯಿತಿ ನಡೆಸಿದ ಹಿರಿಯರು ಅತ್ಯಾಚಾರ ಎಸಗಿದ ಆರೋಪಿಯ ಮಗಳ ಮೇಲೆ ನೀವೂ ಪ್ರತಿಯಾಗಿ ಅತ್ಯಾಚಾರ ನಡೆಸಿ ಎಂದು ತೀರ್ಪು ನೀಡಿದೆ. ಅತ್ಯಾಚಾರಿಯ ಮಗಳಿಗೆ ಈಗಾಗಲೇ ಮದುವೆಯಾಗಿ ಆಕೆ ಗರ್ಭಿಣಿಯಾಗಿದ್ದಾಳೆ.

ಸಂತ್ರಸ್ಥ ಬಾಲಕಿಯ ಕುಟುಂಬದ ಸದಸ್ಯನೊಬ್ಬ ಪಂಚಾಯಿತಿ ತೀರ್ಪಿನ ಅನುಸಾರ ಗರ್ಭಿಣಿ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಮನನೊಂದ ಗರ್ಭಿಣಿ, ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.

ಆಕೆಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಲಾಹೋರ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃಪಟ್ಟಿರುವ ಆಕೆ, ಸಾಯುವ ಮೊದಲು ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...