alex Certify
ಕನ್ನಡ ದುನಿಯಾ       Mobile App
       

Kannada Duniya

317 ಕೋಟಿ ರೂ. ಬಹುಮಾನ ಬಂದಿದ್ದರೂ ಪಡೆಯಲು ಪರಿತಪಿಸಬೇಕಿದೆ ಈಕೆ..!

lottery

ಆಕೆ ಖರೀದಿಸಿದ್ದ ಲಾಟರಿ ಟಿಕೇಟ್ ಗೆ ಬರೋಬ್ಬರಿ 317 ಕೋಟಿ ರೂ. ಬಹುಮಾನ ಬಂದಿದೆ. ಆದರೆ ಏನು ಮಾಡುವುದು ಅದನ್ನು ಪಡೆಯುವ ಅದೃಷ್ಟ ಆಕೆಗೆ ಇದ್ದಂತಿಲ್ಲ. ಇದಕ್ಕೆ ಕಾರಣವಾಗಿರುವುದು ಆಕೆ ಮಾಡಿಕೊಂಡಿರುವ ಯಡವಟ್ಟು.

ಹೌದು. ಲಂಡನ್ ಮಹಿಳೆಯೊಬ್ಬರು ಖರೀದಿಸಿದ್ದ ಲಾಟರಿ ಟಿಕೇಟ್ ಗೆ 33 ಮಿಲಿಯನ್ ಪೌಂಡ್ (ಅಂದಾಜು 317 ಕೋಟಿ ರೂ.) ಬಹುಮಾನ ಬಂದಿದೆ. ಆದರೆ ಈ ಮಹಿಳೆ ಲಾಟರಿ ಟಿಕೇಟ್ ತನ್ನ ಜೀನ್ಸ್ ಪ್ಯಾಂಟ್ ಕಿಸೆಯಲ್ಲಿದ್ದುದನ್ನು ಮರೆತು ಅದನ್ನು ಹಾಗೆಯೇ ವಾಷಿಂಗ್ ಮೆಷಿನ್ ಗೆ ಹಾಕಿದ್ದಾಳೆ. ಅದೀಗ ನಂಬರ್ ಗುರುತಿಸಲಾಗದ ಸ್ಥಿತಿಯಲ್ಲಿದೆ.

ತಾನು ಖರೀದಿಸಿದ್ದ ಟಿಕೇಟ್ ಗೆ ಬಹುಮಾನ ಬಂದಿದ್ದನ್ನು ಅರಿತ ಮಹಿಳೆ ಟಿಕೇಟ್ ಖರೀದಿಸಿದ್ದ ಅಂಗಡಿಯವರ ಬಳಿ ನಡೆದ ಪ್ರಮಾದವನ್ನು ಹೇಳಿಕೊಂಡಿದ್ದಾಳೆ. ಇದೀಗ ಅವರು ಲಾಟರಿ ಸಂಸ್ಥೆಯ ಗಮನಕ್ಕೆ ಈ ವಿಷಯವನ್ನು ತಂದಿದ್ದು, ಆಧುನಿಕ ತಂತ್ರಜ್ಞಾನದ ಮೂಲಕ ಬಹುಮಾನ ಬಂದಿರುವ ಟಿಕೇಟ್ ಅದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುವುದಾಗಿ ಲಾಟರಿ ಸಂಸ್ಥೆ ಭರವಸೆ ನೀಡಿದೆ. ಒಟ್ಟಿನಲ್ಲಿ ಈ ಮಹಿಳೆಗೆ ಈಗ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...