alex Certify
ಕನ್ನಡ ದುನಿಯಾ       Mobile App
       

Kannada Duniya

ಸಮುದ್ರ ದಡದಲ್ಲಿ ಫೋಟೋಗೆ ಪೋಸ್ ಕೊಡ್ತಿದ್ದ ಮಹಿಳೆಗೆ ಆಗಿದ್ದೇ ಬೇರೆ

ಪ್ರವಾಸಿ ಸ್ಥಳಗಳಲ್ಲಿ, ಸುಂದರ ತಾಣಗಳಲ್ಲಿ ಫೋಟೋ ಕ್ಲಿಕ್ಕಿಸೋದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಈ ಕ್ರೇಝ್ ಜಾಸ್ತಿಯಾಗಿದೆ. ಆದ್ರೆ ಎಲ್ಲಾ ಸಲವೂ ಈ ಅನುಭವ ಆಹ್ಲಾದಕರವಾಗಿರುತ್ತೆ ಎಂದುಕೊಳ್ಳೋದು ಅಸಾಧ್ಯ. ಯಾಕಂದ್ರೆ ಒಮ್ಮೊಮ್ಮೆ ಪ್ರಕೃತಿಯ ಆಟದ ಮುಂದೆ ಮನುಷ್ಯ ಸುಮ್ಮನಾಗ್ಲೇಬೇಕು.

ಆಸ್ಟ್ರೇಲಿಯಾದಲ್ಲಿ ಮಹಿಳೆಯೊಬ್ಬಳಿಗೆ ಇದರ ಅನುಭವವಾಗಿದೆ. ಆಕೆ ಬೀಚ್ ನಲ್ಲಿ ಎಂಜಾಯ್ ಮಾಡ್ತಿದ್ಲು. ಎರಡೂ ಕೈಗಳನ್ನು ಚಾಚಿ ಫೋಟೋಗೆ ಪೋಸ್ ಕೊಟ್ಟಿದ್ದಾಳೆ. ಹಿಂದಿನಿಂದ ದೈತ್ಯ ಅಲೆಯೊಂದು ಬರ್ತಿದೆ ಅನ್ನೋ ಸುಳಿವು ಕೂಡ ಅವಳಿಗೆ ಇರಲಿಲ್ಲ.

ರಭಸವಾಗಿ ಬಂದ ಅಲೆ ಅವಳನ್ನು ದಡಕ್ಕೆ ತಂದು ಬಿಸಾಡಿದೆ. ಒಂದು ಕ್ಷಣ ಏನಾಗ್ತಿದೆ ಅನ್ನೋದು ಅರಿವಾಗುವಷ್ಟರಲ್ಲಿ ಮಹಿಳೆ ಮರಳಿನ ರಾಶಿಯಲ್ಲಿ ಬಂದು ಬಿದ್ದಿದ್ಲು. ಆಸ್ಟ್ರೇಲಿಯಾದ ರೂಬಿ ಲೀಗ್ ಫುಟ್ಬಾಲ್ ಪ್ಲೇಯರ್ ಡಾರ್ಸಿ ಲಸ್ಸಿಕ್ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...