alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲ್ವೆ ನಿಲ್ದಾಣವನ್ನು ಮದುವೆಯಾದ ಮಹಿಳೆ ಪ್ರೀತಿ ಹೇಗಿದೆ ಗೊತ್ತಾ?

ಮದುವೆ ಎರಡು ವ್ಯಕ್ತಿಗಳ ನಡುವೆ ಆಗುವಂತಹದ್ದು. ಪ್ರೀತಿ-ವಿಶ್ವಾಸದ ಮೇಲೆ ಮದುವೆ ನಿಂತಿರುತ್ತದೆ. ಆದ್ರೆ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಲ್ಲಿನ ಮಹಿಳೆಯೊಬ್ಬಳು ರೈಲ್ವೆ ನಿಲ್ದಾಣವನ್ನು ಪತಿಯಾಗಿ ಸ್ವೀಕರಿಸಿದ್ದಾಳೆ.

45 ವರ್ಷದ ಕೈರೋಲ್ ಕಳೆದ 36 ವರ್ಷಗಳಿಂದ ಕ್ಯಾಲಿಫೋರ್ನಿಯಾದ ಸಾಂತಾ ಫೆ ನಿಲ್ದಾಣವನ್ನು ಪ್ರೀತಿಸುತ್ತಿದ್ದಾಳಂತೆ. 9 ವರ್ಷದವಳಿದ್ದಾಗಲೇ ನಿಲ್ದಾಣವನ್ನು ಪ್ರೀತಿಸಲು ಶುರುಮಾಡಿದ್ದ ಮಹಿಳೆ ಮದುವೆಯಾದ ನಂತ್ರ ತನ್ನ ಹೆಸರು ಬದಲಾಯಿಸಿಕೊಂಡಿದ್ದಾಳೆ. ಕೈರೋಲ್ ಸಾಂತಾ ಪೆ ಎಂದು ಹೆಸರಿಟ್ಟುಕೊಂಡಿದ್ದಾಳೆ.

ಅಮೆರಿಕಾ ಮಾಧ್ಯಮವೊಂದರ ಪ್ರಕಾರ ಕೈರೋಲ್ 2015ರಲ್ಲಿ ನಿಲ್ದಾಣದ ಜೊತೆ ಮದುವೆಯಾಗಿದ್ದಾಳಂತೆ. ಹಿಂದಿನ ವರ್ಷ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾಳೆ. ಇದಕ್ಕೆ ಕಾನೂನಿನ ಮಾನ್ಯತೆಯಿಲ್ಲ. ಪ್ರತಿದಿನ 45 ನಿಮಿಷಗಳ ಕಾಲ ಪ್ರಯಾಣ ಬೆಳೆಸಿ ಪತಿ ರೈಲ್ವೆ ನಿಲ್ದಾಣವನ್ನು ಭೇಟಿ ಮಾಡಿ ಬರ್ತಾಳೆ. ನಿಲ್ದಾಣದ ಗೋಡೆಗಳನ್ನು ಪ್ರೀತಿಯಿಂದ ಮುಟ್ಟುವ ಈಕೆಗೆ ಗೋಡೆಗಳು ಕೂಡ ಪ್ರೀತಿ ತೋರಿಸ್ತಿವೆ ಎಂಬ ಭಾವನೆ ಮೂಡುತ್ತದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...