alex Certify
ಕನ್ನಡ ದುನಿಯಾ       Mobile App
       

Kannada Duniya

OMG ! ವರನಿಲ್ಲದೆ ನಡೆದಿದೆ ಈ ಮದುವೆ…!

ಇತ್ತೀಚಿನ ದಿನದಲ್ಲಿ ಮದುವೆಯ ಕೊನೆ ಕ್ಷಣದಲ್ಲಿ ವರ ಅಥವಾ ವಧು ಕಣ್ಮರೆಯಾಗಿ ಮದುವೆ ನಿಂತಿರುವ ಪ್ರಕರಣಗಳು ಸಾಮಾನ್ಯ. ಆದರೆ ಇಲ್ಲೊಂದು ಮದುವೆ, ವರನಿಲ್ಲದೇ ನೆರವೇರಿದೆ.

ಆರೇ, ವರನಿಲ್ಲದೇ ಮದುವೆ ಹೇಗೆ? ಇನ್ನೊಬ್ಬ ಹುಡುಗನೊಂದಿಗೆ ವಧು ಮದುವೆಯಾದಳೇ ಎಂದು ನೀವು ಯೋಚಿಸುತ್ತಿದ್ದರೆ, ಅದು ತಪ್ಪು. ಹೌದು, ಉಗಾಂಡ ಮೂಲದ ಲೂಲು ಎನ್ನುವ ಯುವತಿ ಮದುವೆಯನ್ನು ತನ್ನೊಂದಿಗೆ ನಿಶ್ಚಿಯಿಸಿಕೊಂಡು, ತನಗೆ ತಾನೇ ಮದುವೆಯಾಗಿದ್ದಾಳೆ.

ವಿಚಿತ್ರ ಎನಿಸಿದರೂ, ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ 32 ವರ್ಷದ ಯುವತಿ ಈ ರೀತಿ ಮದುವೆಯಾಗಿದ್ದಾಳೆ. ಮದುವೆಗೆ ಇಷ್ಟವಿಲ್ಲದಿದ್ದರೂ ಪೋಷಕರು ಮದುವೆಯಾಗುವಂತೆ ಒತ್ತಡ ಹೇರಿದ್ದರಿಂದ, ತನ್ನೊಂದಿಗೆ ತಾನು ಮದುವೆಯಾಗಲು ನಿಶ್ಚಯಿಸಿ, ಮದುವೆ ಉಡುಗೆಯಲ್ಲಿ ಬಂದಿದ್ದಾಳೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವತಿ, 16 ವರ್ಷದಿಂದಲೇ ಪೋಷಕರು ಮದುವೆಯಾಗುವಂತೆ ಒತ್ತಡ ಹೇರಿದರು. ಆದರೆ ನನಗೆ ಇಷ್ಟವಿಲ್ಲದೇ ಇರುವುದರಿಂದ, ಮುಂದೂಡುತ್ತ ಬಂದಿದ್ದೆ. ಆದರೀಗ ಒತ್ತಡ ಹೆಚ್ಚಾಗಿದ್ದರಿಂದ, ನನ್ನ ಮದುವೆಯನ್ನು ನನ್ನೊಂದಿಗೆ ಮಾಡಿಕೊಂಡಿದ್ದೇನೆ. ಈ ಬಗ್ಗೆ ಪೋಷಕರಿಬ್ಬರಿಗೂ ಬೇಸರವಿದ್ದು, ಅವರೊಂದಿಗೆ ಕೂತು ಸಮಾಧಾನ ಮಾಡುತ್ತೇನೆ ಎಂದಿದ್ದಾಳೆ.

ಒಟ್ಟಾರೆ ಮದುವೆಗೆ ಯುವತಿ ಕೇವಲ 2.62 ಡಾಲರ್ ಖರ್ಚು ಮಾಡಿದ್ದಾಳೆ. ಸಹೋದರ ಮದುವೆಯ ಕೇಕ್ ನೀಡಿದ್ದು, ಸ್ನೇಹಿತೆ ವಧುವಿನ ಡ್ರೆಸ್ ನ್ನು ಬಾಡಿಗೆಗೆ ನೀಡಿದ್ದಾಳೆ. ಇನ್ನು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ತಮ್ಮ ಊಟದ ಖರ್ಚನ್ನು ತಾವೇ ನೀಡಿದ್ದಾರೆ ಎಂದು ಯುವತಿ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...