alex Certify
ಕನ್ನಡ ದುನಿಯಾ       Mobile App
       

Kannada Duniya

ಫೋಟೋ ಗೆ ಪೋಸ್ ಕೊಡುವ ಭರದಲ್ಲಿ ವಧು ಮಾಡಿಕೊಂಡ್ಲು ಯಡವಟ್ಟು

wed-fire

ಮದುವೆ ಅನ್ನೋದು ಪ್ರತಿಯೊಬ್ಬರ ಬದುಕಿನಲ್ಲೂ ಅತ್ಯಂತ ಮಹತ್ವದ ದಿನ. ಹಾಗಾಗಿ ಆ ಮಧುರ ಕ್ಷಣಗಳೆಲ್ಲ ಕ್ಯಾಮರಾದಲ್ಲಿ ಅದ್ಭುತವಾಗಿ ಸೆರೆಯಾಗ್ಲಿ ಅಂತಾನೇ ಎಲ್ಲರೂ ಬಯಸ್ತಾರೆ. ಅದರಲ್ಲೂ ವಧು ಫೋಟೋ ಬಗ್ಗೆ ಹೆಚ್ಚು ಎಚ್ಚರಿಕೆ ಮತ್ತು ಉತ್ಸಾಹದಿಂದಿರ್ತಾರೆ. ಒಳ್ಳೆ ಫೋಟೋಗಾಗಿ ಸ್ವಲ್ಪ ರಿಸ್ಕ್ ತೆಗೆದುಕೊಳ್ಳೋದಕ್ಕೂ ವಧು ರೆಡಿ.

ಚೀನಾದಲ್ಲಿ ವಧು ಒಬ್ಬಳಿಗೆ ವೆಡ್ಡಿಂಗ್ ಗೌನ್ ನಲ್ಲಿ ಸುಂದರವಾದ ಫೋಟೋ ತೆಗೆಸಿಕೊಳ್ಳಬೇಕೆಂಬ ಆಸೆ. ಛಾಯಾಗ್ರಾಹಕ ಕೂಡ ಅದಕ್ಕೆ ಒಪ್ಪಿದ್ದ. ಫೋಟೋ ಚೆನ್ನಾಗಿ ಬರಲಿ ಅಂತಾ ವಧುವನ್ನು ಬೇರೆ ಬೇರೆ ಜಾಗಗಳಲ್ಲಿ ನಿಲ್ಲಿಸಿ ಛಾಯಾಗ್ರಾಹಕ ಫೋಟೋ ಕ್ಲಿಕ್ಕಿಸಿದ್ದಾನೆ.

ಈ ವೇಳೆ ಅಚಾನಕ್ ಆಗಿ ವಧುವಿನ ಗೌನ್ ಗೆ ಬೆಂಕಿ ಹೊತ್ತಿಕೊಂಡಿದೆ. ಅದನ್ನು ಆರಿಸಲು ಪ್ರಯತ್ನಿಸಿದ್ರೂ ಸಾಧ್ಯವಾಗಿಲ್ಲ. ಇನ್ನು ಸ್ವಲ್ಪ ತಡವಾಗಿದ್ರೂ ವಧು ಮೈಕೈ ಸುಟ್ಟುಕೊಳ್ಳಬೇಕಾಗ್ತಿತ್ತು. ಕೊನೆಗೆ ಹೇಗೋ ಮಾಡಿ ಬೆಂಕಿ ಆರಿಸಿದ್ದಾರೆ, ಆದ್ರೆ ಅಷ್ಟರಲ್ಲಾಗ್ಲೇ ವಧುವಿನ ಗೌನ್ ಪೂರ್ತಿ ಸುಟ್ಟು ಹೋಗಿತ್ತು. ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...