alex Certify
ಕನ್ನಡ ದುನಿಯಾ       Mobile App
       

Kannada Duniya

ಶೌಚಾಲಯದಲ್ಲಿ ಹುಡುಗಿಗಾಯ್ತು ಇಂಥ ಅನುಭವ..!

images

ನಮ್ಮ ಜೀವನದಲ್ಲಾಗುವ ಕೆಲವೊಂದು ಘಟನೆಗಳ ಬಗ್ಗೆ ನಮಗೆ ಕಲ್ಪನೆಯೇ ಇರೋದಿಲ್ಲ. ಇಂತಹದ್ದೇ ಒಂದು ಅನುಭವ ಚೀನಾದ ಹುಡುಗಿಗಾಗಿದೆ. ಶೌಚಾಲಯಕ್ಕೆ ಹೋದ ಹುಡುಗಿ ಸುಮಾರು 6 ಗಂಟೆಗಳ ಕಾಲ ಅಲ್ಲೇ ಇರಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಆಕೆ ಕಾಲು ಟಾಯ್ಲೆಟ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದು ಇದಕ್ಕೆ ಕಾರಣವಾಯ್ತು.

ಶೌಚಾಲಯಕ್ಕೆ ಹೋಗಿದ್ದ ಹುಡುಗಿ ಕಾಲು ಟಾಯ್ಲೆಟ್ ನಲ್ಲಿ ಸಿಕ್ಕಿಬಿದ್ದಿತ್ತು. ಹುಡುಗಿ ಸ್ವಲ್ಪ ಸಮಯ ಕಾಲನ್ನು ತೆಗೆಯಲು ಪ್ರಯತ್ನಪಟ್ಟಿದ್ದಾಳೆ. ಪ್ರಯತ್ನ ವಿಫಲವಾಗಿದೆ. ನಂತ್ರ ಆಕೆ ಮನೆಯವರು ಸಹಾಯಕ್ಕೆ ಬಂದಿದ್ದಾರೆ. ಅವರಿಂದಲೂ ಕಾಲನ್ನು ತೆಗೆಯಲು ಸಾಧ್ಯವಾಗಲಿಲ್ಲ. ಸುದ್ದಿ ತಿಳಿದು ಅಕ್ಕ-ಪಕ್ಕದವರೆಲ್ಲ ಅಲ್ಲಿಗೆ ಬಂದಿದ್ದಾರೆ.

ಶೌಚಾಲಯದಲ್ಲಿ ಜನರ ಸಂಖ್ಯೆ ಹೆಚ್ಚಾಗ್ತಾ ಇದ್ದಂತೆ ಹುಡುಗಿಗೆ ಉಸಿರುಗಟ್ಟಲು ಶುರುವಾಗಿದೆ. ತಕ್ಷಣ ಕುಟುಂಬಸ್ಥರು ರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಕಾಲನ್ನು ತೆಗೆಯಲು ಕಸರತ್ತು ಮಾಡಿದ್ದಾರೆ. ನಂತ್ರ ಕಮೋಡ್ ಒಡೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ. ಕಮೋಡ್ ಒಡೆದ್ರೆ ಹುಡುಗಿ ಕಾಲಿಗೆ ಅಪಾಯವಾಗಬಹುದೆಂಬ ಭಯ ಅವರನ್ನು ಕಾಡಿದೆ  ಆದ್ರೂ ಅನೇಕ ಸಲಕರಣೆಗಳನ್ನು ಬಳಸಿ ಕಮೋಡ್ ಒಡೆದು ಹುಡುಗಿ ಕಾಲನ್ನು ಸುರಕ್ಷಿತವಾಗಿ ಹೊರಗೆ ತೆಗೆದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...