alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸೇರಿಯನ್ ಬಳಿಕ ವೈದ್ಯರು ಮಾಡಿದ್ದಾರೆ ಯಡವಟ್ಟು

ಹೆರಿಗೆ ಅನ್ನೋದು ವೈದ್ಯರ ಬಹುದೊಡ್ಡ ಜವಾಬ್ಧಾರಿ. ಮಗು ಮತ್ತು ಗರ್ಭಿಣಿಯ ಪ್ರಾಣ ವೈದ್ಯರ ಕೈಯ್ಯಲ್ಲಿರುತ್ತದೆ. ಕೆಲವೊಮ್ಮೆ ವೈದ್ಯರ ನಿರ್ಲಕ್ಷದಿಂದ ಮಗು ಮತ್ತು ತಾಯಿಯ ಜೀವಕ್ಕೂ ಅಪಾಯವಾಗಿರುವ ಉದಾಹರಣೆಗಳಿವೆ. ಬ್ರಿಟನ್ ನಲ್ಲಿ ಕೂಡ ಇಂಥದ್ದೇ ಘಟನೆಯೊಂದು ನಡೆದಿದೆ.

ಸಿಸೇರಿಯನ್ ಬಳಿಕ ಮಹಿಳೆಯ ಕರುಳು ಹೊಟ್ಟೆಯಿಂದ ಜಾರಿ ಹೊರಕ್ಕೆ ಬಿದ್ದುಬಿಟ್ಟಿದೆ. ಕೆಲ್ಲಿ ಮೇನಾರ್ಡ್ ಎಂಬ ಮಹಿಳೆಗೆ ಸಿ-ಸೆಕ್ಷನ್ ಮೂಲಕ ಹೆರಿಗೆ ಮಾಡಲಾಗಿತ್ತು. ಆಸ್ಪತ್ರೆಯಿಂದ ಮಗುವಿನೊಂದಿಗೆ ಮರಳಿ ಮನೆಗೆ ತೆರಳಿ ಒಂದೆರಡು ದಿನಗಳಾದ್ರೂ ಮಹಿಳೆಗೆ ನೋವು ಕಡಿಮೆಯಾಗಿರಲಿಲ್ಲ.

ಸಿಸೇರಿಯನ್ ಬಳಿಕ ತನಗೆ ಸರಿಯಾಗಿ ಹೊಲಿಗೆ ಹಾಕಿಲ್ಲ ಅನ್ನೋದು ಅವಳಿಗೆ ಗೊತ್ತಾಗಿತ್ತು. ಅಷ್ಟೇ ಅಲ್ಲ ಹೊಟ್ಟೆಯಲ್ಲಿರೋ ಯಾವುದೋ ಅಂಗಾಂಗ ಓಡಾಡಿದಂತಾಗುತ್ತಿತ್ತು. ವಿಪರೀತ ನೋವಿನಿಂದ ಕೆಲ್ಲಿ ಒದ್ದಾಡಿಬಿಟ್ಟಿದ್ದಳು. ಮತ್ತೆ ಆಸ್ಪತ್ರೆಗೆ ಬಂದಾಗ ಕರುಳು ಜಾರಿ ಬಿದ್ದಿರೋದು ಪತ್ತೆಯಾಗಿದೆ. ಮತ್ತೆ ಆಕೆಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಅದನ್ನು ಸರಿಪಡಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...