alex Certify
ಕನ್ನಡ ದುನಿಯಾ       Mobile App
       

Kannada Duniya

ಅಪರಿಚಿತರ ಮನೆ ಮುಂದೆ ಮಗು ಬಿಟ್ಟು ಹೋದ ಮಹಿಳೆ

ಮಹಿಳೆಯೊಬ್ಬಳು 2 ವರ್ಷದ ಮಗುವನ್ನು ಅಪರಿಚಿತೆಯೊಬ್ಬಳ ಮನೆ ಬಾಗಿಲಲ್ಲಿ ಬಿಟ್ಟು ತೆರಳಿದ ಘಟನೆಯೊಂದು ಅಮೆರಿಕದ ಟೆಕ್ಸಾಸ್ ನಲ್ಲಿ ನಡೆದಿದೆ. ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆ ಹಿಡಿಯಲ್ಪಟ್ಟಿದ್ದು, ನೋಡಿದವರೆಲ್ಲಾ ಇಂದೆಂಥ ವಿಚಿತ್ರ ಎಂದು ಅಚ್ಚರಿಗೊಳಗಾಗಿದ್ದಾರೆ.

ಅಚಾನಕ್ ಆಗಿ ಮಗುವಿನೊಂದಿಗೆ ಬಂದ ಮಹಿಳೆ ಮನೆಯ ಬಾಗಿಲು ಬಡಿಯುತ್ತಾಳೆ. ತಕ್ಷಣ ಒಂಚೂರು ತಡಮಾಡದೆ, ಅಲ್ಲೇ ಮಗುವನ್ನು ಬಿಟ್ಟು ತೆರಳುತ್ತಾಳೆ. ಮನೆಯೊಡತಿ ಬಂದು ನೋಡಿದಾಗ ಎರಡು ವರ್ಷದ ಮಗು ಮನೆ ಬಾಗಿಲಲ್ಲಿ ನಿಂತಿರುತ್ತದೆ.

ಆ ಮಗುವನ್ನು ಆರೈಕೆ ಮಾಡುವ ಮಹಿಳೆ ಮಾರನೇ ದಿನ ಬೆಳಗ್ಗೆಯೇ ಪೊಲೀಸರಿಗೆ ದೂರು ನೀಡುತ್ತಾರೆ. ಆ ಪ್ರದೇಶದ ಎಲ್ಲಾ ಮನೆಗಳ ಬಾಗಿಲು ಬಡಿಯುವ ಪೊಲೀಸರು ಮಗುವಿನ ಹೆತ್ತವರನ್ನು ಹುಡುಕುವ ಪ್ರಯತ್ನವನ್ನೂ ನಡೆಸುತ್ತಾರೆ.

ಅಂತೂ ಮಗುವಿನ ಅಪ್ಪ ಸಿಗುತ್ತಾರೆ. ಅನಾರೋಗ್ಯಕ್ಕೀಡಾದ ಆತನ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಗುವನ್ನು ಅನಾಥವಾಗಿ ಬಿಟ್ಟು ಹೋದ ಮಹಿಳೆ ಮಗುವಿನ ತಾಯಿಯ ಸ್ನೇಹಿತೆ ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಆ ಹೆಂಗಸು ಇಂತಹ ಕೃತ್ಯ ಯಾಕೆ ಮಾಡಿದ್ದಾಳೆಂದು ಈವರೆಗೂ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...