alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರ್ಟ್ಸ್ ಹಾಕಿದ್ದಕ್ಕೆ ಮಹಿಳೆಯ ಮುಖಕ್ಕೆ ಒದ್ದ….

face kickಇಸ್ತಾಂಬುಲ್ ನಲ್ಲಿ ಮಹಿಳೆಯೊಬ್ಬಳು ಶಾರ್ಟ್ಸ್ ಧರಿಸಿದ್ದಾಳೆ ಅನ್ನೋ ಕಾರಣಕ್ಕೆ ಅವಳ ಮುಖದ ಮೇಲೆ ಒದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವೃತ್ತಿಯಲ್ಲಿ ನರ್ಸ್ ಆಗಿದ್ದ ಮಹಿಳೆಯೊಬ್ಬಳು ಟರ್ಕಿಯ ಉಸ್ಕುದರ್ ಪ್ರದೇಶದಲ್ಲಿ ಬಸ್ ನಲ್ಲಿ ಪ್ರಯಾಣಿಸ್ತಾ ಇದ್ಲು.

ಈ ವೇಳೆ ಆಕೆ ಶಾರ್ಟ್ಸ್ ಧರಿಸಿದ್ಲು. ಬಸ್ ನಲ್ಲಿದ್ದ ವ್ಯಕ್ತಿಯೊಬ್ಬ ಶಾರ್ಟ್ಸ್ ಧರಿಸುವವರನ್ನೆಲ್ಲ ಕೊಂದುಬಿಡಬೇಕು ಎಂದು ಸಿಟ್ಟಿನಲ್ಲಿ ಕೂಗಿಕೊಂಡ. ನಂತರ ಆ ಮಹಿಳೆಯ ಮುಖದ ಮೇಲೆ ಒದ್ದಿದ್ದಾನೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಹಲ್ಲೆ ಮಾಡಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆಕೆ ಧರಿಸಿದ್ದ ಉಡುಪು ನೋಡಿ ಕೋಪಗೊಂಡು ಹಲ್ಲೆ ಮಾಡಿದೆ ಅಂತಾ ಆತ ಹೇಳಿಕೊಂಡಿದ್ದಾನೆ.

ಕಂಪನಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಆತ, ಉನ್ಮಾದಗ್ರಸ್ಥ ಖಿನ್ನತೆಯಿಂದ ಬಳಲುತ್ತಿದ್ದ. ಇನ್ನು ಟರ್ಕಿಯಲ್ಲಿ ದಿನೇ ದಿನೇ ಮಹಿಳೆಯರ ಮೇಲಿನ ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಪತಿಯಿಂದಲೇ ಕೊಲೆಯಾಗುತ್ತಿರುವ ಮಹಿಳೆಯರ ಸಂಖ್ಯೆಯೇ ಅಧಿಕ. ಪ್ರತಿ ವರ್ಷ ನೂರಕ್ಕೂ ಹೆಚ್ಚು ಮಹಿಳೆಯರು ಹತ್ಯೆಗೀಡಾಗುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...