alex Certify
ಕನ್ನಡ ದುನಿಯಾ       Mobile App
       

Kannada Duniya

21 ನೇ ಮಗುವಿಗೆ ಜನ್ಮ ನೀಡಿದ ಮಹಾತಾಯಿ…!

ಯುಕೆ ನಿವಾಸಿಯೊಬ್ಬಳು ಕೆಲ ದಿನಗಳ ಹಿಂದಷ್ಟೆ 21ನೇ ಮಗುವಿಗೆ ಜನ್ಮ ನೀಡಿದ್ದಾಳೆ. 21 ಮಕ್ಕಳ ಮಹಾತಾಯಿ ಹೆಸರು ಶು ರೆಡ್ಪೋರ್ಡ್. ಈಕೆ ಪತಿ ಹೆಸರು ನಿವೋಲ್. ಪತಿ, ಪತ್ನಿ ಸೇರಿ ಇವ್ರ ಮನೆಯಲ್ಲಿರುವ ಸದಸ್ಯರ ಸಂಖ್ಯೆ 23.

ವರದಿ ಪ್ರಕಾರ ಹಿಂದಿನ ವಾರ 12 ನಿಮಿಷದ ಹೆರಿಗೆ ನೋವು ಅನುಭವಿಸಿ ಶು 21ನೇ ಮಗುವಿಗೆ ಜನ್ಮ ನೀಡಿದ್ದಾಳೆ. 42 ವರ್ಷದ ಶು ಪ್ರಕಾರ, ಹೊಸ ಮಗುವಿನ ಸ್ವಾಗತಕ್ಕೆ ಮನೆಯವರೆಲ್ಲ ಸಿದ್ಧರಾಗಿದ್ದರಂತೆ. ಮಕ್ಕಳೆಲ್ಲ ಪ್ರೀತಿಯಿಂದ ಮಗುವನ್ನು ಬರಮಾಡಿಕೊಂಡಿದ್ದಾರೆಂದು ಶು ಹೇಳಿದ್ದಾಳೆ.

ಶು 14 ವರ್ಷದಲ್ಲಿರುವಾಗ ಮೊದಲ ಮಗುವಿಗೆ ಜನ್ಮ ನೀಡಿದ್ದಳಂತೆ. ಮದುವೆ ನಂತ್ರ ಕೆಲವರು ಮೂರು ಮಕ್ಕಳನ್ನು ಪಡೆಯುವಂತೆ ಸಲಹೆ ನೀಡಿದ್ದರಂತೆ. ಶು ಕೂಡ ಮೂರು ಮಕ್ಕಳು ಸಾಕು ಎಂದುಕೊಂಡಿದ್ದಳಂತೆ. ಮದುವೆಯಾಗಿ 28 ವರ್ಷಕ್ಕೆ 21 ಮಕ್ಕಳನ್ನು ಹೆತ್ತಿದ್ದಾಳೆ.

ಮೊದಲ ಮಗಳಿಗೆ ಮೂರು ಮಕ್ಕಳಿದ್ದು, ಈಗಾಗಲೇ ಶು ಅಜ್ಜಿಯಾಗಿದ್ದಾಳೆ. 21 ಮಕ್ಕಳು ಸಾಕು. ಇನ್ಮುಂದೆ ಮಕ್ಕಳು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾಳಂತೆ. ಗರ್ಭಿಣಿ ಸಮಯವನ್ನು ಮಿಸ್ ಮಾಡಿಕೊಳ್ತೇನೆ ಎನ್ನುತ್ತಾಳೆ ಶು. ಈ ಬಾರಿ ಆಸ್ಪತ್ರೆಗೆ ಹೋದಾಗ, ಮುಂದಿನ ವರ್ಷ ಬರ್ತಿರಾ ಎಂದು ಸಿಬ್ಬಂದಿ ಕೇಳಿದ್ದರಂತೆ. ಇದಕ್ಕೆ ಇಲ್ಲವೆಂದು ಶು ಉತ್ತರಿಸಿದ್ದಾಳಂತೆ. ವಿಶೇಷವೆಂದ್ರೆ ಹಿಂದಿನ ವರ್ಷ 20ನೇ ಮಗು ಜನಿಸಿದಾಗ ಕೂಡ ಶು ಇದೇ ಉತ್ತರ ನೀಡಿದ್ದಳಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...