alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಯಕನನ್ನು ಎಲ್ಲರೆದುರೇ ಬಿಗಿದಪ್ಪಿದ ಯುವತಿ ಅರೆಸ್ಟ್‌…!

ಸೌದಿ ಅರೇಬಿಯಾ : ಸಂಗೀತ ಕಾರ್ಯಕ್ರಮದಲ್ಲಿ ಗಾಯಕನನ್ನು ವೇದಿಕೆಯಲ್ಲೇ ಅಪ್ಪಿಕೊಂಡ ಯುವತಿಯನ್ನು ಸೌದಿ ಅರೇಬಿಯಾ ಪೊಲೀಸರು ಬಂಧಿಸಿದ್ದಾರೆ.

ಕಾರ್ಯಕ್ರಮ ನಡೆಯುತ್ತಿದ್ದಂತೆಯೇ ಸಭೆಯಿಂದ ಓಡಿ ಬಂದ ಯುವತಿ, ಗಾಯಕನನ್ನು ಬಿಗಿದಪ್ಪಿಕೊಂಡು ಒಂದು ಕ್ಷಣ ಅವಾಂತರ ಸೃಷ್ಟಿಸಿದ್ದಾಳೆ. ತಕ್ಷಣ ಭದ್ರತಾ ಪಡೆ ಸಿಬ್ಬಂದಿ ಯುವತಿಯನ್ನು ಎಳೆದರೂ, ಆಕೆ ಗಾಯಕನನ್ನು ಬಿಟ್ಟಿಲ್ಲ.

ಈ ವೇಳೆ ಕಾರ್ಯಕ್ರಮದಲ್ಲಿ ನಾಟಕೀಯ ಸನ್ನಿವೇಶ ಸೃಷ್ಟಿಯಾಗಿದೆ. ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿದ್ದು, ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಯುವತಿಯನ್ನು ಕಾರ್ಯಕ್ರಮದಿಂದ ಹೊರಕ್ಕೆ ಎಳೆದೊಯ್ದ ಪೊಲೀಸರು, ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸೌದಿ ಅರೇಬಿಯಾದಲ್ಲಿ ಮಹಿಳೆಯರು ಅನ್ಯ ಪುರುಷನೊಂದಿಗೆ ಅಸಭ್ಯವಾಗಿ ವರ್ತಿಸುವುದು ಅಪರಾಧವಾಗಿರುವುದರಿಂದ ಕ್ರಮ ಜರುಗಿಸಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...