alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಮಾದಲ್ಲಿದ್ದ ಯುವತಿ ಪಾಪ್ ಸಾಂಗ್ ಕೇಳಿ ಎಚ್ಚರಗೊಂಡ್ಲು…!

ಸಂಗೀತಕ್ಕೆ ಕಾಯಿಲೆ ಗುಣಪಡಿಸುವ ಶಕ್ತಿ ಇದೆ ಅಂತಾ ಕೇಳಿದ್ದೇವೆ, ಆದ್ರೆ ಚೀನಾದಲ್ಲಿ ಈ ಮಾತು ನಿಜವಾಗಿದೆ. ಕಳೆದ ನಾಲ್ಕು ತಿಂಗಳಿಂದ ಕೋಮಾದಲ್ಲಿದ್ದ 24 ವರ್ಷದ ಯುವತಿಯೊಬ್ಬಳು ಪಾಪ್ ಸ್ಟಾರ್ ಸಂಗೀತ ಕೇಳಿ ಕೋಮಾದಿಂದ ಹೊರಬಂದಿದ್ದಾಳೆ.

ಆಮ್ಲಜನಕದ ಕೊರತೆಯಿಂದ ಮೆದುಳು ಕಾರ್ಯ ನಿರ್ವಹಿಸದೆ ಚೀನಾದ ಈ ಯುವತಿ ಕೋಮಾದಲ್ಲಿದ್ದಳು. ಕಳೆದ ವರ್ಷದ ನವೆಂಬರ್ ನಿಂದ ಆಸ್ಪತ್ರೆಯಲ್ಲೇ ಇದ್ದ ಈ ಯುವತಿಯನ್ನು ಎಚ್ಚರಿಸಲು ನರ್ಸ್ ಗಳು, ಜೋಕ್ ಹೇಳ್ತಿದ್ರು, ನ್ಯೂಸ್ ಗಳನ್ನು ಓದುತ್ತಿದ್ರು. ಆದ್ರೆ ಆಕೆ ಕೋಮಾದಿಂದ ಹೊರಬಂದಿರಲಿಲ್ಲ.

ಒಂದು ದಿನ ಈ ಯುವತಿಗೆ ಥೈವಾನಿ ಪಾಪ್ ಸ್ಟಾರ್ ಜೇ ಚೌ ಹಾಡುಗಳನ್ನು ಕೇಳಿಸಿದಾಗ ಆಕೆಯ ಪಾದಗಳು ಚಲಿಸಿದಂತೆ ಕಂಡವು. ಹೀಗಾಗಿ ಆಕೆಗೆ ಪಾಪ್ ಸ್ಟಾರ್ ಜೇ ಚೌ ಸಂಗೀತ ಇಷ್ಟ ಎಂದು ತಿಳಿಯಿತು. ಪ್ರತಿದಿನ ಇದೇ ಹಾಡುಗಳನ್ನು ಹಾಕುತ್ತಿದ್ದೆವು. ಕಳೆದ ಮಾರ್ಚ್ ನಲ್ಲಿ ಪಾಪ್ ಸ್ಟಾರ್ ಸಿಂಗರ್ ನ 2006 ಹಿಟ್ ರೋಸ್ಮೆರಿ ಹಾಡು ಹಾಕಿದಾಗ ಆಕೆ ಕಣ್ಣು ಬಿಟ್ಟಳು. ಇದು ನಿಜಕ್ಕೂ ನಮಗೆ ಆಶ್ಚರ್ಯ ಮೂಡಿಸಿತು ಅಂತಾ ಆಸ್ಪತ್ರೆ ನರ್ಸ್ ಗಳು ಹೇಳ್ತಾರೆ. ಒಟ್ನಲ್ಲಿ ಸಂಗೀತಕ್ಕೆ ಎಂತಹ ನೋವನ್ನೂ ಗುಣಪಡಿಸುವ ಶಕ್ತಿ ಇದೆ ಎಂಬುದು ಇದರಿಂದಲೇ ತಿಳಿಯುತ್ತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...