alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಲದಿಂದ ತಪ್ಪಿಸಿಕೊಳ್ಳಲು ಮಹಿಳೆ ಮಾಡಿದ್ದಾಳೆ ಇಂಥ ಕೆಲಸ..!

abc-18

ಸಾಲದಿಂದ ತಪ್ಪಿಸಿಕೊಳ್ಳಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಮದ್ಯದ ದೊರೆ ಮಲ್ಯ ದೇಶವನ್ನೇ ಬಿಟ್ಟು ಹೋಗಿದ್ದಾನೆ. ಇನ್ನು ಕೆಲವರು ಸಾಲ ಕೊಟ್ಟವರ ಕಣ್ಣು ತಪ್ಪಿಸಿ ಓಡಾಡ್ತಾರೆ. ಆದ್ರೆ ಚೀನಾದ ಈ ಮಹಿಳೆ ಮಾಡಿದ ಕೆಲಸ ಆಶ್ಚರ್ಯ ಹುಟ್ಟಿಸುವಂತಿದೆ.

ಶಾಂಘೈನ ವೊಹಾನ್ ನಗರದಲ್ಲಿ ಮಹಿಳೆಯೊಬ್ಬಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಎರಡುವರೆ ಕೋಟಿ ಸಾಲದಿಂದ ತಪ್ಪಿಸಿಕೊಳ್ಳಲು ಮಹಿಳೆ ಈ ಕೆಲಸ ಮಾಡಿದ್ದಳು. ಸ್ಥಳೀಯ ಕೋರ್ಟ್ ಮಹಿಳೆಗೆ ಸಾಲ ತೀರಿಸುವಂತೆ ಆದೇಶ ನೀಡಿತ್ತು. ಕೋರ್ಟ್ ಆದೇಶದ ನಂತ್ರ ಮಹಿಳೆ ನಗರ ಬಿಟ್ಟು ಓಡಿ ಹೋಗಿದ್ದಳು. ಆದ್ರೆ ಆಗ ಸಿಕ್ಕಿಬಿದ್ದಾಗ ಪೊಲೀಸರು ದಂಗಾದ್ರು.

ಪೊಲೀಸ್ ಪ್ರಕಾರ, 57 ವರ್ಷದ ಮಹಿಳೆ 30 ವರ್ಷದವಳಂತೆ ಕಾಣ್ತಿದ್ದಳಂತೆ. Zhu Najuan ಹೆಸರಿನ ಮಹಿಳೆ ಬೇರೆ ಬೇರೆಯವರ ಹೆಸರು, ಗುರುತಿನ ಚೀಟಿ ನೀಡಿ ದೇಶದಾದ್ಯಂತ ಸುತ್ತುತ್ತಿದ್ದಳಂತೆ.

ಚೀನಾದಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಬ್ಯಾಂಕ್ ಸಾಲವನ್ನು ತೀರಿಸುತ್ತಿಲ್ಲ. ಮಹಿಳೆ ನಂತ್ರ ನಗರದಲ್ಲಿ ಸಾಲ ತೀರಿಸದ ವ್ಯಕ್ತಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಈವರೆಗೆ 186 ಮಂದಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...